ಸೋಮವಾರ, ಅಕ್ಟೋಬರ್ 14, 2019
29 °C

ಮಹಿಳೆ ಹತ್ಯೆ: ಆರೋಪಿ ಶರಣು

Published:
Updated:

ಬೆಂಗಳೂರು: ಮಹಿಳೆ ಕೊಂದ ಆರೋಪಿ ಶವದೊಂದಿಗೆ ಠಾಣೆಗೆ ಬಂದು ಪೊಲೀಸರಿಗೆ ಶರಣಾದ ವಿಚಿತ್ರ ಘಟನೆ ಬಾಣಸವಾಡಿಯಲ್ಲಿ ಮಂಗಳವಾರ ನಡೆದಿದೆ.ಎಚ್‌ಆರ್‌ಬಿಆರ್ ಲೇಔಟ್ ವಾಸಿ ಸರಳಾ (30) ಕೊಲೆಯಾಗಿ, ಆರೋಪಿ ಶ್ರೀನಿವಾಸ್ ಪೊಲೀಸರ ವಶದಲ್ಲಿದ್ದಾನೆ.

ಈತ ಆಟೊ ಚಾಲಕನಾಗಿದ್ದು ಸರಳಾ ಜತೆ ಐದು ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದ. ಹಣ ನೀಡುವಂತೆ ಸರಳಾ ಪದೇ ಪದೇ ಒತ್ತಾಯಿಸುತ್ತಿದ್ದಳು. ಮಂಗಳವಾರ ಮಧ್ಯಾಹ್ನ ಇಬ್ಬರೂ ಆಟೊದಲ್ಲಿ ಎಚ್‌ಆರ್‌ಬಿಆರ್ ಲೇಔಟ್ ಬಳಿಯ ಉದ್ಯಾನಕ್ಕೆ ಬಂದರು. ಆಗ ಹಣ ನೀಡುವಂತೆ  ಪುನಃ ಒತ್ತಾಯಿಸಿದ್ದಾಳೆ. ಇಲ್ಲದಿದ್ದರೆ ಅಕ್ರಮ ಸಂಬಂಧದ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಕೋಪಗೊಂಡ ಶ್ರೀನಿವಾಸ್ ವೇಲ್‌ನಿಂದ ಅವರ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ.  `ಶವವನ್ನು ತನ್ನ ಆಟೊದಲ್ಲಿಯೇ ಸಾಗಿಸುವ ಪ್ರಯತ್ನ ಮಾಡಿ ನಗರವನ್ನು ಸುತ್ತಿದ್ದಾನೆ. ಏನು ಮಾಡಬೇಕು ಎಂದು ತೋಚದೆ ಶವದೊಂದಿಗೆ ಠಾಣೆಗೆ ಬಂದು ಶರಣಾಗಿದ್ದಾನೆ~ ಎಂದು ಪೊಲೀಸರು ತಿಳಿಸಿದರು. ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

Post Comments (+)