ಶುಕ್ರವಾರ, ಮೇ 14, 2021
30 °C

ಮಹೀಂದ್ರಾ ಕಾಂಪ್ಯಾಕ್ಟ್ `ವೆರಿಟೊ ವೈಬ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹೀಂದ್ರಾ ಅಂಡ್ ಮಹೀಂದ್ರಾ ಲಿ.(ಎಂಎಂಎಲ್) ರಾಜ್ಯದ ಮಾರುಕಟ್ಟೆಗೆ ಗುರುವಾರ ಕಾಂಪ್ಯಾಕ್ಟ್ ಕಾರು `ವೆರಿಟೊ ವೈಬ್' ಪರಿಚಯಿಸಿದೆ.`ವೆರಿಟೊ ವೈಬ್' ಪ್ರವೇಶದಿಂದ ದೇಶದ ವಾಹನ ಮಾರುಕಟ್ಟೆಯಲ್ಲಿ ಕಂಪೆನಿಗೆ ಸ್ಪೋರ್ಟಿ ಸೆಡಾನ್ ವರ್ಗದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಇಲ್ಲಿ ಹೆಚ್ಚಿನ ಬೆಳವಣಿಗೆ ಸಾಧ್ಯವಾಗಲಿದೆ ಎಂದು `ಎಂಎಂಎಲ್'ನ ಮಾರಾಟ ವಿಭಾಗದ ಉಪಾಧ್ಯಕ್ಷ ವಿಜಯ್ ನಕ್ರಾ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಮಹಿಂದ್ರಾ ಘಟಕದಲ್ಲಿಯೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವ ಈ ವಾಹನ 1.5ಲೀ ಡಿಸಿಐ ಡೀಸೆಲ್ ಎಂಜಿನ್ ಹೊಂದಿದ್ದು, 20.8 ಕಿ.ಮೀ ಮೈಲೇಜ್ ನೀಡಬಲ್ಲದು. ಡಿ2, ಡಿ4 ಮತ್ತು ಡಿ6 ಶ್ರೇಣಿ ಮತ್ತು 7 ಬಣ್ಣಗಳ ಆಯ್ಕೆಯಲ್ಲಿದ್ದು, ಬೆಲೆ ರೂ.5.68 ಲಕ್ಷದಿಂದ 6.54 ಲಕ್ಷದವರೆಗೂ ಇದೆ(ಬೆಂಗಳೂರು ಎಕ್ಸ್‌ಷೋರೂಂ) ಎಂದರು.ವೆರಿಟೊದಲ್ಲಿ ಅತ್ಯಾಧುನಿಕ ಚಾಲನಾ ಮಾಹಿತಿ ವ್ಯವಸ್ಥೆ, ಉತ್ತಮ ಎಲ್‌ಇಡಿ ಲೈಟ್ ಸ್ಟ್ರೀಮಿಂಗ್ ಹಿಂಬದಿ ದೀಪ, ಫಾಗ್ ಲ್ಯಾಂಪ್ ಅಳವಡಿಸಲಾಗಿದೆ. 3 ವರ್ಷ ಅಥವಾ 1 ಲಕ್ಷ ಕಿ.ಮೀ.ವರೆಗೆ ವಾರಂಟಿ ಇದೆ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.