ಶನಿವಾರ, ಏಪ್ರಿಲ್ 17, 2021
23 °C

ಮಹೀಂದ್ರ ಸತ್ಯಂ: ರೂ352 ಕೋಟಿ ತ್ರೈಮಾಸಿಕ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್(ಪಿಟಿಐ): ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿ `ಮಹೀಂದ್ರ ಸತ್ಯಂ~ ಪ್ರಸಕ್ತ ಹಣಕಾಸು ವರ್ಷದ 1ನೇ ತ್ರೈಮಾಸಿಕದಲ್ಲಿ ಶೇ 56ರ ಉತ್ತಮ ಸಾಧನೆಯೊಂದಿಗೆ ರೂ352 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯ ಲಾಭ ರೂ225 ಕೋಟಿ ಇದ್ದಿತು.ಒಟ್ಟಾರೆ ವರಮಾನದಲ್ಲಿಯೂ ಶೇ 31ರ ಹೆಚ್ಚಳವಾಗಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ರೂ1880 ಕೋಟಿ ವರಮಾನ ಬಂದಿದೆ ಎಂದು ಕಂಪೆನಿ ಅಧ್ಯಕ್ಷ ವಿನೀತ್ ನಯ್ಯರ್ ಗುರುವಾರ ಇಲ್ಲಿ ಹೇಳಿದರು.

ಮೊದಲ ತ್ರೈಮಾಸಿಕದಲ್ಲಿ ಹೊಸದಾಗಿ 2643 ಮಂದಿ ನೇಮಕವಾಗಿದ್ದು, ಜೂನ್ 30ರ ವೇಳೆಗೆ ಒಟ್ಟು ಸಿಬ್ಬಂದಿ ಸಂಖ್ಯೆ 35,996ಕ್ಕೆ ಏರಿದೆ.ಷೇರು ಬ್ರೋಕರ್ಸ್‌ಗೆ ರೂ4 ಲಕ್ಷ ದಂಡ ವಿಧಿಸಿದ `ಸೆಬಿ~

ಮುಂಬೈ(ಪಿಟಿಐ):
ವಿಡಿಯೋಕಾನ್ ಲಿ.ನ ಷೇರುಗಳನ್ನು 2004ರಲ್ಲಿ ತಮ್ಮಳಗೇ ಮಾರಾಟ-ಖರೀದಿ ನಡೆಸುತ್ತಾ ಇದ್ದ ಎರಡು ಬ್ರೋಕರೇಜ್ ಸಂಸ್ಥೆಗಳಿಗೆ ಷೇರು ನಿಯಂತ್ರಣ ಮಂಡಳಿ(ಸೆಬಿ) ತಲಾ ರೂ2 ಲಕ್ಷ ದಂಡ ವಿಧಿಸಿದೆ.ಮನಸುಖ್ ಸೆಕ್ಯುರಿಟೀಸ್ ಅಂಡ್ ಫೈನಾನ್ಸ್ ಲಿ(ಎಂಎಸ್‌ಎಫ್‌ಎಲ್) ಮತ್ತು ಇಂಟೆಕ್ ಷೇರ್ಸ್ ಅಂಡ್ ಸ್ಟಾಕ್ ಬ್ರೋಕರ್ಸ್ ಲಿ.(ಐಎಸ್‌ಎಸ್‌ಎಲ್) ಎಂಟು ವರ್ಷಗಳ ಹಿಂದೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಈಗ ದಂಡನೆ ಶಿಕ್ಷೆಗೊಳಗಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.