ಮಹೇಶ್ವರಿ ದೇಗುಲ ಮಂಡಳಿ ನಿರ್ಲಕ್ಷ್ಯ: ಆರೋಪ

7

ಮಹೇಶ್ವರಿ ದೇಗುಲ ಮಂಡಳಿ ನಿರ್ಲಕ್ಷ್ಯ: ಆರೋಪ

Published:
Updated:

ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ಮಿಣಕನಗುರ್ಕಿ ಗ್ರಾಮದ ಮಹೇಶ್ವರಿ ದೇಗುಲದ ಉದ್ಯಾನದಲ್ಲಿ ಬೀದಿನಾಯಿಗಳು ನುಗ್ಗಿ ಮೂರು ಜಿಂಕೆಗಳನ್ನು ಕಚ್ಚಿ ಸಾಯಿಸಿದ ಘಟನೆ ಬುಧವಾರ ನಡೆದಿದೆ.

ಉದ್ಯಾನದಲ್ಲಿ ಒಟ್ಟು ಐದು ಜಿಂಕೆಮರಿಗಳನ್ನು ಸಾಕಲಾಗಿತ್ತು.ಬುಧವಾರ ಉದ್ಯಾನದೊಳಗೆ ನುಗ್ಗಿದ ಬೀದಿನಾಯಿಗಳು ದಾಳಿ ಮಾಡಿದ ಪರಿಣಾಮ ಮೂರು ಜಿಂಕೆಗಳು ಸ್ಥಳದಲ್ಲೇ ಮೃತಪಟ್ಟರೆ, ಇನ್ನೂ ಎರಡು ಜಿಂಕೆಗಳು ಅಲ್ಲಿಂದ ಪರಾರಿಯಾದವು.`ನಾಯಿಗಳ ದಾಳಿಯಿಂದ ಜಿಂಕೆಗಳು ಚೀರಾ ಡುತ್ತಿರುವುದು ಗೊತ್ತಾದ ಕೂಡಲೇ ಕೆಲವರು ಉದ್ಯಾನ ಪ್ರವೇಶಿಸಿ ಅವುಗಳ ರಕ್ಷಣೆಗೆ ಮುಂದಾದರು.ಆದರೆ ತೀವ್ರ ಸ್ವರೂಪದಲ್ಲಿ ಗಾಯಗೊಂಡ ಮೂರು ಜಿಂಕೆಗಳು ಕೊನೆಯುಸಿರೆಳೆದಿದ್ದವು.

ಮೂರು ಜಿಂಕೆಗಳನ್ನು ರಕ್ಷಿಸಲು ಆಗಲಿಲ್ಲ~ ಎಂದು ಗ್ರಾಮಸ್ಥರು `ಪ್ರಜಾವಾಣಿ~ಗೆ ತಿಳಿಸಿದರು.

`ಈ ಉದ್ಯಾನಕ್ಕೆ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ.ಜಿಂಕೆ ಮರಿಗಳನ್ನು ರಕ್ಷಣೆ ದೇವಾಲಯದ ಸಿಬ್ಬಂದಿ ಕರ್ತವ್ಯ. ಜಿಂಕೆಗಳನ್ನು ಸಾಕಿದ ಮೇಲೆ ಅವುಗಳನ್ನು ಜಾಗ ರೂಕತೆಯಿಂದ ನೋಡಿಕೊಳ್ಳಬೇಕು.ನಿರ್ಲಕ್ಷ್ಯ ತೋರಿದ ಪರಿಣಾಮವೇ ಮೂರು ಜಿಂಕೆಗಳು ಸಾವನ್ನಪ್ಪಿವೆ~ ಎಂದು ಆರೋಪಿಸಿದರು.ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಂಗಾಧರ ಯ್ಯ, ವಲಯ ಅರಣ್ಯಧಿಕಾರಿ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಜಿಂಕೆಗಳ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯಾ ಧಿಕಾರಿ ಪಾಂಡುರಂಗಪ್ಪ ನಡೆಸಿದರು.

ಇದೇ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು `ಪ್ರಜಾವಾಣಿ~ಯೊಂದಿಗೆ ಮಾತನಾಡಿ ಪ್ರಾಣಾಪಾಯದಿಂದ ಪಾರಾ ಗಿರುವ ಎರಡು ಜಿಂಕೆಗಳನ್ನು ಬೆಂಗಳೂರಿನ ಬನ್ನೇರುಘಟ್ಟ ಪ್ರಾಣಿ ಉದ್ಯಾನಕ್ಕೆ ಕಳುಹಿಸಲು ತೀರ್ಮಾನಿಸ್ದ್ದಿದಾಗಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry