ಮಹೇಶ್‌ಗೆ ಪ್ರಶಸ್ತಿ

7
ಚಾಲೆಂಜರ್‌-5 ಸ್ಕ್ವಾಷ್‌ ಟೂರ್ನಿ

ಮಹೇಶ್‌ಗೆ ಪ್ರಶಸ್ತಿ

Published:
Updated:

ನಿಮೆಸ್‌, ಫ್ರಾನ್ಸ್‌ (ಪಿಟಿಐ): ಭಾರತದ ಮಹೇಶ್‌ ಮನಗಾಂವ್ಕರ್‌ ಇಲ್ಲಿ ನಡೆದ ಪಿಎಸ್‌ಎ ಚಾಲೆಂಜರ್‌-5 ಸ್ಕ್ವಾಷ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ಮುಂಬೈನ ಯುವ ಆಟಗಾರ ಫೈನಲ್‌ನಲ್ಲಿ 9-11, 11-3, 11-4, 11-5 ರಲ್ಲಿ ಅಗ್ರಶ್ರೇಯಾಂಕದ ಆಟಗಾರ ಸ್ಕಾಟ್ಲೆಂಡ್‌ನ ಗ್ರೆಗ್‌ ಲೊಬಾನ್ ಎದುರು ಅಚ್ಚರಿಯ ಗೆಲುವು ಪಡೆದರು. ಪಿಎಸ್‌ಎ ಟೂರ್‌ನಲ್ಲಿ ಮಹೇಶ್‌ಗೆ ದೊರೆತ ಮೂರನೇ ಪ್ರಶಸ್ತಿ ಇದು.19ರ ಹರೆಯದ ಮಹೇಶ್‌ ಹೋದ ತಿಂಗಳು ಸ್ಲೊವಾಕಿಯದಲ್ಲಿ ನಡೆದ ಇಮೆಟ್‌ ಓಪನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ಹೊಸ ವರ್ಷದ ಮೊದಲ ಟೂರ್ನಿಯಲ್ಲೇ ಯಶಸ್ಸು ಪಡೆದಿದ್ದಾರೆ.ಫೈನಲ್‌ನಲ್ಲಿ ಲೊಬಾನ್‌ ಮೊದಲ ಗೇಮ್‌ಅನ್ನು 11-9 ರಲ್ಲಿ ತಮ್ಮದಾಗಿಸಿಕೊಂಡರು. ಆ ಬಳಿಕ ತಿರುಗೇಟು ನೀಡಿದ ಮಹೇಶ್‌ ಸತತ ಮೂರು ಗೇಮ್‌ಗಳನ್ನು ಗೆದ್ದುಕೊಂಡು ಚಾಂಪಿಯನ್‌ ಆದರು.ಭಾರತದ ಆಟಗಾರ ಸೆಮಿಫೈನಲ್‌ನಲ್ಲಿ 11-9, 11-2, 11-0 ರಲ್ಲಿ ಎರಡನೇ ಶ್ರೇಯಾಂಕದ ಸ್ಪರ್ಧಿ ಕುವೈಟ್‌ನ ಅಮ್ಮಾರ್‌ ಅಲ್‌ತಮೀಮಿ ವಿರುದ್ಧ ಗೆಲುವು ಪಡೆದಿದ್ದರು. ಮಹೇಶ್‌ ಕೇವಲ 28 ನಿಮಿಷಗಳಲ್ಲಿ ಪಂದ್ಯ ತಮ್ಮದಾಗಿಸಿಕೊಂಡಿದ್ದರು.ಕ್ವಾರ್ಟರ್‌ ಫೈನಲ್‌ನಲ್ಲಿ ಅವರು 11-6, 8-11, 11-4, 11-5 ರಲ್ಲಿ ಇಂಗ್ಲೆಂಡ್‌ನ ಯೂಸುಫ್‌ ಅಬ್ದುಲ್ಲಾ ಅವರನ್ನು ಮಣಿಸಿದ್ದರು.‘2014ರ ಋತುವಿನ ಮೊದಲ ಪ್ರಶಸ್ತಿ ಜಯಿಸಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿ ದೊರೆಯಬಹುದೆಂಬ ವಿಶ್ವಾಸ ಇದೆ. ಜರ್ಮನ್‌ ಲೀಗ್‌ ಹಾಗೂ ಮುಂದಿನ ತಿಂಗಳು ಫಿನ್ಲೆಂಡ್‌ನಲ್ಲಿ ನಡೆಯಲಿರುವ ಟೂರ್ನಿಗೆ ಸಿದ್ಧತೆ ನಡೆಸುವುದು ನನ್ನ ಗುರಿ’ ಎಂದು ಮಹೇಶ್‌ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry