ಮಾಂಜಾ ಬಳಕೆ ಸಲ್ಲ ಜಾಗೃತಿ ಕಾರ್ಯಕ್ರಮ

ಸಂಕ್ರಾಂತಿ ಹಬ್ಬದ ಸಮಯದಲ್ಲಿ ಗಾಳಿಪಟ ಹಾರಿಸುವುದು ಸಹಜ. ಆದರೆ ಗಾಳಿಪಟ ಹಾರಿಸಲು ಬಳಸುವ ಮಾಂಜಾ ಮಾತ್ರ ಪಕ್ಷಿಗಳ ಪಾಲಿಗೆ ಮಾರಕ. ಕೆಲವೊಮ್ಮೆ ಪಕ್ಷಿಗಳ ರೆಕ್ಕೆ ಹರಿದರೆ, ಇನ್ನು ಕೆಲವು ಪ್ರಕರಣಗಳಲ್ಲಿ ಹಕ್ಕಿಗಳ ಜೀವಕ್ಕೆ ಮಾರಕವಾಗುತ್ತದೆ.
ಹೀಗಾಗಿಯೇ ಪೀಪಲ್ ಫಾರ್ ಅನಿಮಲ್ಸ್ ಭಾನುವಾರ (ಜ.17)ದಂದು ‘ಮಾಂಜಾ’ ಕುರಿತು ಜಾಗೃತಿ ಅಭಿಯಾನ ಕೈಗೊಂಡಿದೆ.
ಸರ್ಜಾಪುರ ಮುಖ್ಯರಸ್ತೆಯಲ್ಲಿ ಇರುವ ಕೈಕೊಂಡರಹಳ್ಳಿಯ ಮೈದಾನದಲ್ಲಿ ‘ಬೆಂಗಳೂರು ಕೈಟ್ ಫೆಸ್ಟಿವಲ್ 2016’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ನಡೆಸಲಾಗುತ್ತದೆ.
ಇಲ್ಲಿ ಗಾಳಿಪಟ ಹಾರಿಸುವವರು ಮಾಂಜಾ ಬಳಸುವುದು ಸಹಜ. ಹೀಗಾಗಿಯೇ ಸ್ಪರ್ಧೆ ಪ್ರಾರಂಭವಾಗುವ ಮುನ್ನ ಬೆಳಿಗ್ಗೆ 9ಕ್ಕೆ ಸ್ಪರ್ಧೆ ನಡೆಯುವ ಮೈದಾನದ ಹೊರಗಡೆ ಅರಿವಿನ ಅಭಿಯಾನವನ್ನು ನಡೆಸಲು ‘ಪೀಪಲ್ ಫಾರ್ ಅನಿಮಲ್ಸ್’ ನಿರ್ಧರಿಸಿದೆ.
ಅಭಿಯಾನದಲ್ಲಿ ಮಾಂಜಾ ಬಳಕೆಯಿಂದ ಪಕ್ಷಿಗಳ ಮೇಲಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಲಾಗುವುದು. ಮಾಹಿತಿಗೆ: 7022457222.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.