ಮಾಂಜ್ರಾ ನದಿ: ಜೂನ್‌ಗೆ 4 ಬ್ಯಾರೇಜ್ ಪೂರ್ಣ

7

ಮಾಂಜ್ರಾ ನದಿ: ಜೂನ್‌ಗೆ 4 ಬ್ಯಾರೇಜ್ ಪೂರ್ಣ

Published:
Updated:

ಬೆಂಗಳೂರು: ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಜೀರಗಿಹಾಳ, ಮಾಣಿಕೇಶ್ವರ ಮತ್ತು ಹಾಲಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನಿರ್ಮಾಣ ಕಾರ್ಯ ಜೂನ್‌ಗೆ ಪೂರ್ಣಗೊಳ್ಳಲಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.ಕಾಂಗ್ರೆಸ್‌ನ ಈಶ್ವರ ಭೀಮಣ್ಣ ಖಂಡ್ರೆ ಪ್ರಶ್ನೆಗೆ ಉತ್ತರಿಸಿದ ಅವರು, ಒಟ್ಟು ನಾಲ್ಕು ಬ್ಯಾರೇಜ್‌ಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಚಂದಾಪುರ ಬ್ಯಾರೇಜ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.ಕಾಮಗಾರಿಗಳನ್ನು ಪೂರ್ಣಗೊಳಿಸುವುದು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿ, ದಂಡ ವಿಧಿಸಲಾಗಿದೆ. ಅಲ್ಲದೆ ಅಧಿಕಾರಿಗಳಿಗೂ ಎಚ್ಚರಿಕೆ ಹಾಗೂ ಕಾರಣ ಕೇಳುವ ನೋಟಿಸ್ ನೀಡಲಾಗಿದೆ ಎಂದರು.ಜೀರಗಿಹಾಳ್, ಮಾಣಿಕೇಶ್ವರ್ ಮತ್ತು ಚಂದಾಪುರ ಬ್ಯಾರೇಜ್‌ನಿಂದ ತಲಾ 4,890 ಎಕರೆ ಮತ್ತು ಹಾಲಹಳ್ಳಿ ಬ್ಯಾರೇಜ್‌ನಿಂದ 16,628 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಮಳೆ ಹಾಗೂ ಪ್ರವಾಹ, ಬ್ಯಾರೇಜ್‌ಗಳ ಅಡಿಪಾಯದಲ್ಲಿ ಗಟ್ಟಿಕಲ್ಲು ಸಿಗುತ್ತಿರುವ ಕಾರಣ ಕಾಮಗಾರಿ ವಿಳಂಬವಾಗಿದೆ ಎಂದು ತಿಳಿಸಿದರು.ಸಾಂಸ್ಕೃತಿಕ ಭವನ: ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಔರಾದ್ ತಾಲ್ಲೂಕಿನ ಸಂತಪೂರ ಗ್ರಾಮದಲ್ಲಿ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಭಾಲ್ಕಿ ಪಟ್ಟಣ ಮತ್ತು ಬೀದರ್‌ನಲ್ಲಿ ಕನ್ನಡ ಭವನ ನಿರ್ಮಿಸಲು ತಲಾ 10 ಮತ್ತು 15 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ರಹೀಂ ಖಾನ್ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry