ಸೋಮವಾರ, ಮಾರ್ಚ್ 27, 2023
23 °C
ಎಸ್‌.ಎಫ್‌. ಹುಸೇನಿ ಅವರಿಂದ ಸಾಂಜಿ ಚಿತ್ರಕಲೆ ಶಿಬಿರ

ಮಾಗಡಿ:ಎಲ್ಲರ ಗಮನ ಸೆಳೆದ ಸಾಂಜಿ ಚಿತ್ರಕಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ:ಎಲ್ಲರ ಗಮನ ಸೆಳೆದ ಸಾಂಜಿ ಚಿತ್ರಕಲೆ

ಮಾಗಡಿ: ಅಭಿಜಾತ ಸಾಂಜಿ ಚಿತ್ರಕಲಾವಿದ ಮೈಸೂರಿನ ಎಸ್‌.ಎಫ್‌. ಹುಸೇನಿ ಕಳೆದ 22 ವರ್ಷಗಳಿಂದ ಸಾರ್ಥಕ ಕಲಾಸೇವೆ ಮಾಡಿಕೊಂಡು ಬಂದಿದ್ದಾರೆ.



ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತವಾಗಿ ಸಾಂಜಿ ಕಲೆಯನ್ನು ಕಾಗದ ಕತ್ತರಿಸಿ ಕಲಿಸಿಕೊಡುತ್ತಿದ್ದಾರೆ. ಇಂತಹ ಎಲೆಯ ಮರೆಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹಿರಿಯ ಲೇಖಕ ಡಿ.ಆರ್‌.ಚಂದ್ರಮಾಗಡಿ ಅಭಿಪ್ರಾಯಪಟ್ಟರು.



ಹೊಂಬಾಳಮ್ಮನ ಪೇಟೆಯ ಚಲುವ ನಾರಾಯಣಸ್ವಾಮಿ ಸಾಂಸ್ಕೃತಿಕ ಸಂಘದ ವತಿಯಿಂದ ಏರ್ಪಡಿಸಿ ಸಾಂಜಿ ಚಿತ್ರಕಲೆಯ ಉಚಿತ ಕಲಿಕಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.



ಕಲಾವಿದ ಎಸ್‌.ಎಫ್‌.ಹುಸೇನಿ ಮಾತನಾಡಿ ಸ್ವಾತಂತ್ರ್ಯೋತ್ಸವಕ್ಕೂ ಗಣಪತಿಗೂ ತೀರಾ ಹತ್ತಿರದ ಸಂಬಂಧವಿದೆ. ಬಾಲಗಂಗಾಧರ್‌ ತಿಲಕ್‌ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಗಣಪತಿ ಹಬ್ಬ ಆಚರಣೆಯ ಮೂಲಕ ಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು  ಹತ್ತಿಸಿದ್ದರು. ತ್ರಿವರ್ಣದಲ್ಲಿ ಕಾಗದ ಕಲೆಯಲ್ಲಿ ಚಿತ್ರ ಕತ್ತರಿಸುವುದು ಒಂದು ಕೌಶಲವಾಗಿದೆ ಎಂದರು. 



ಗ್ರಾಮೀಣ ಭಾಗದ ಮಕ್ಕಳಿಗೆ ಪ್ರತಿವರ್ಷವೂ ಸಹ ಉಚಿತ ತರಬೇತಿ ನೀಡುವುದಾಗಿ ಅವರು ಈ ಸಂದರ್ಭದಲ್ಲಿ ವಿವರಿಸಿದರು. ನೂರಾರು ಮಕ್ಕಳು ಭಾಗವಹಿಸಿದ್ದರು. ಲೇಖಕರಾದ ಗಂಗನರಸಿಂಹಯ್ಯ, ಹಿರಿಯ ಚಿತ್ರಕಲಾವಿದ ನೀಲಕಂಠಯ್ಯ, ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ದೊಡ್ಡಬಾಣಗೆರೆ ಮಾರಣ್ಣ  ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.