ಬುಧವಾರ, ಜನವರಿ 22, 2020
22 °C

ಮಾಜಿ ಕ್ರಿಕೆಟಿಗ ಮಧುಸೂದನ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಮಾಜಿ ಟೆಸ್ಟ್ ಆಟಗಾರ ಮಧುಸೂದನ್ ರೇಗೆ (89) ಅವರು ಮಂಗಳವಾರ ವಿಧಿವಶರಾದರು.1949 ರಲ್ಲಿ ಭಾರತದ ಪರ ಏಕೈಕ ಟೆಸ್ಟ್ ಆಡಿದ್ದ ರೇಗೆ, ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು 15 ರನ್‌ ಗಳಿಸಿದ್ದರು. 39 ಪ್ರಥಮ ದರ್ಜೆ ಪಂದ್ಯಗಳ ನ್ನಾಡಿದ್ದು ಆರು ಶತಕ ಮತ್ತು 12 ಅರ್ಧ ಶತಕ ಸಹಿತ 2348 ರನ್ ಕಲೆಹಾಕಿದ್ದಾರೆ.ಆಫ್ ಸ್ಪಿನ್ ಬೌಲರ್ ಕೂಡಾ ಆಗಿದ್ದ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 33 ವಿಕೆಟ್ ಪಡೆದಿದ್ದರು. ರೇಗೆ ಅವರ ನಿಧನಕ್ಕೆ ಬಿಸಿಸಿಐ ಪರವಾಗಿ ಕಾರ್ಯದರ್ಶಿ ಸಂಜಯ್ ಪಟೇಲ್ ಸಂತಾಪ ಸೂಚಿಸಿದ್ದಾರೆ.

ಪ್ರತಿಕ್ರಿಯಿಸಿ (+)