ಮಾಜಿ ಕ್ರಿಕೆಟ್ ಕೋಚ್‌ಗೆ ಅಜಯ್ ಮಾಕನ್ ನೆರವು

7

ಮಾಜಿ ಕ್ರಿಕೆಟ್ ಕೋಚ್‌ಗೆ ಅಜಯ್ ಮಾಕನ್ ನೆರವು

Published:
Updated:

ನವದೆಹಲಿ (ಪಿಟಿಐ): ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಕ್ರಿಕೆಟ್ ಕೋಚ್ ವೀರೇಂದ್ರ ಭಟ್ನಾಗರ್ ಅವರಿಗೆ ಹಣಕಾಸಿನ ನೆರವು ನೀಡಲು ಕ್ರೀಡಾ ಸಚಿವ ಅಜಯ್ ಮಾಕನ್ ಮುಂದಾಗಿದ್ದಾರೆ.ಕ್ರೀಡಾಪಟುಗಳಿಗೆ ಮೀಸಲಿಟ್ಟಿರುವ ರಾಷ್ಟ್ರೀಯ ಕಲ್ಯಾಣ ನಿಧಿಯಿಂದ ಭಟ್ನಾಗರ್ ಅವರ ಚಿಕಿತ್ಸೆಗಾಗಿ ಮೂರು ಲಕ್ಷ ರೂಪಾಯಿ ನೆರವು ನೀಡಿದ್ದಾರೆ.ಭಟ್ನಾಗರ್ ರಾಜಧಾನಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಿಕಿತ್ಸೆ ಹಣವನ್ನು ಭರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ಕ್ರೀಡಾ ಸಚಿವಾಲಯದ ಗಮನಕ್ಕೆ ಬಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry