ಮಾಜಿ ಫುಟ್‌ಬಾಲ್ ಆಟಗಾರ ನಾರಾಯಣಸ್ವಾಮಿ ನಿಧನ

7

ಮಾಜಿ ಫುಟ್‌ಬಾಲ್ ಆಟಗಾರ ನಾರಾಯಣಸ್ವಾಮಿ ನಿಧನ

Published:
Updated:
ಮಾಜಿ ಫುಟ್‌ಬಾಲ್ ಆಟಗಾರ ನಾರಾಯಣಸ್ವಾಮಿ ನಿಧನ

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ತಂಡದ ಮಾಜಿ ಆಟಗಾರ ಟಿ. ನಾರಾಯಣಸ್ವಾಮಿ (76) ಬುಧವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ.ಎಲ್‌ಆರ್‌ಡಿಇ ನಾರಾಯಣಸ್ವಾಮಿ ಎಂದೇ ಪ್ರಸಿದ್ಧಿ ಪಡೆದಿದ್ದ ಅವರು 1960-61 ರಲ್ಲಿ ರಾಜ್ಯ ಸೀನಿಯರ್ ತಂಡವನ್ನು ಪ್ರತಿನಿಧಿಸಿದ್ದರು. ಒಂದು ಕಾಲದಲ್ಲಿ ಅವರು ಎಲ್‌ಆರ್‌ಡಿಎ ತಂಡದ ಪರ ಪ್ರಮುಖ ಆಟಗಾರ ಎನಿಸಿದ್ದರು. 1995 ರಲ್ಲಿ ಎಲ್‌ಆರ್‌ಡಿಇ ಹುದ್ದೆಯಿಂದ ನಿವೃತ್ತಿಯಾಗಿದ್ದರು.ಎಲ್‌ಆರ್‌ಡಿಇ ತಂಡದ ಪರ ರೋವರ್ಸ್‌ ಕಪ್, ಡ್ಯುರಾಂಡ್ ಕಪ್ ಒಳಗೊಂಡಂತೆ ಹಲವಾರು ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರು. ಅಂತ್ಯಸಂಸ್ಕಾರ ಶುಕ್ರವಾರ ಮಧ್ಯಾಹ್ನ ವಿಲ್ಸನ್‌ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ನಡೆಯಲಿದೆ. ಅವರ ನಿಧನಕ್ಕೆ ಕೆಎಸ್‌ಎಫ್‌ಎ ಮತ್ತು ಬಿಡಿಎಫ್‌ಎ ಸಂತಾಪ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry