ಮಾಜಿ ಮ್ಯಾನೇಜರ್ ವಿರುದ್ಧ ವೀಣಾ ಗರಂ

7

ಮಾಜಿ ಮ್ಯಾನೇಜರ್ ವಿರುದ್ಧ ವೀಣಾ ಗರಂ

Published:
Updated:

ಇಸ್ಲಾಮಾಬಾದ್‌ (ಪಿಟಿಐ): ಭಾರತದ ಪ್ರಶಾಂತ್‌ ಸಿಂಗ್‌ ಎಂಬುವರು ತಮ್ಮ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿದ್ದು, ಟ್ವಿಟ್ಟರ್‌­­-­­ನಲ್ಲಿ ತಮ್ಮ ವಿವಾದಾತ್ಮಕ ಛಾಯಾಚಿತ್ರಗಳನ್ನು ಹಾಕುವ ಮೂಲಕ ನಂಬಿಕೆದ್ರೋಹ ಮಾಡಿದ್ದಾರೆ ಎಂದು ಪಾಕಿಸ್ತಾನ ನಟಿ ವೀಣಾ ಮಲಿಕ್‌ ಆರೋಪಿಸಿದ್ದಾರೆ.‘ಈ ಹಿಂದೆ ಪ್ರಶಾಂತ್ ನನ್ನ ಮ್ಯಾನೇಜರ್ ಆಗಿದ್ದರು. ಈಗ­ಅವರು ಹಣ ಹಾಗೂ ಕೀಳುಮಟ್ಟದ ಪ್ರಚಾರಕ್ಕಾಗಿ ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.‘ಅವರೊಬ್ಬ ಸುಳ್ಳುಗಾರ. ಅವರ ಆರೋಪವೆಲ್ಲವೂ ಆಧಾರ ರಹಿತ. ನನಗೆ ಅಣ್ಣನ ರೀತಿಯಲ್ಲಿರುವ ಅವರು ನನ್ನ ಗೆಳೆಯ ಎಂಬುದು ಸುಳ್ಳು’ ಎಂದು ಜಿಯೊ ಸುದ್ದಿವಾಹಿನಿಗೆ ಹೇಳಿದ್ದಾರೆ.ಪ್ರಶಾಂತ್‌ ಅವರಿಗೆ ₨10000 ನೀಡಿ ಕೆಲಸ ಕೊಟ್ಟಿದ್ದೆ. ಅವರು ತಮ್ಮ ಇತಿಮಿತಿ ಅರಿಯಬೇಕು ಎಂದು ಕಿಡಿಕಾರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry