ಗುರುವಾರ , ಮೇ 13, 2021
39 °C

ಮಾಜಿ ಸಂಸದನ ಪತ್ನಿ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಬೀದರ್ ಕ್ಷೇತ್ರದ ಮಾಜಿ ಸಂಸತ್‌ಸದಸ್ಯ ದಿ.ರಾಮಚಂದ್ರ ಆರ್ಯ ಅವರ ಪತ್ನಿ ಶಂಕ್ರೆಮ್ಮ ಆರ್ಯರನ್ನು (79) ಅಪಹರಿಸಿದ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮಾರ್ಚ್ 13ರಂದು ಮನೆಯಿಂದ ತೋಟಕ್ಕೆ ಹೋದ ಶಂಕ್ರೆಮ್ಮ ರಾಮಚಂದ್ರ ಆರ್ಯ ಅವರನ್ನು ಎಲ್ಲ ಕಡೆ  ಹುಡುಕಾಡಿದರೂ ಸಿಕ್ಕಿಲ್ಲ.ಅವರ ಹಿರಿಯ ಪುತ್ರ ಪರಮೇಶ್ವರ ಆರ್ಯ ನೀಡಿದ ದೂರಿನನ್ವಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.