ಮಂಗಳವಾರ, ನವೆಂಬರ್ 19, 2019
24 °C

ಮಾಜಿ ಸಂಸದ ಆದಿಕೇಶವುಲು ನಿಧನ

Published:
Updated:

ಬೆಂಗಳೂರು: ಆಂಧ್ರಪ್ರದೇಶದ ಚಿತ್ತೂರಿನ ಮಾಜಿ ಸಂಸದ, ಉದ್ಯಮಿ ಡಿ.ಕೆ.ಆದಿಕೇಶವುಲು (72) ಅವರು ಬುಧವಾರ ರಾತ್ರಿ ನಗರದಲ್ಲಿ ನಿಧನರಾದರು.ಕೆಲ ದಿನಗಳ ಹಿಂದೆ ಹೃದಯಾಘಾತವಾಗಿದ್ದು, ಚಿಕಿತ್ಸೆಗಾಗಿ ವೈಟ್‌ಫೀಲ್ಡ್‌ನಲ್ಲಿರುವ ತಮ್ಮ ಒಡೆತನದ ವೈದೇಹಿ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಪೇಸ್‌ಮೇಕರ್ ಅಳವಡಿಸಿ ಶಸ್ತ್ರಚಿಕಿತ್ಸೆ ನಡೆಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.ಮೃತರು ಪತ್ನಿ ಸತ್ಯಪ್ರಭಾ, ಪುತ್ರಿಯರಾದ ತೇಜೇಶ್ವರಿ, ಕಲ್ಪಜಾ, ಪುತ್ರ ಶ್ರೀನಿವಾಸ್, ಅಳಿಯಂದಿರಾದ ಕೆ.ಎಂ.ಶ್ರೀನಿವಾಸಮೂರ್ತಿ, ಪ್ರೇಮ್‌ಚಂದರ್ ಅವರನ್ನು ಅಗಲಿದ್ದಾರೆ. ಟಿಟಿಡಿಯ (ತಿರುಮಲ ತಿರುಪತಿ ದೇವಸ್ಥಾನ) ಮಾಜಿ ಅಧ್ಯಕ್ಷರಾಗಿದ್ದ ಅವರು ಶ್ರೀನಿವಾಸ ತಾಂತ್ರಿಕ ಸಂಸ್ಥೆ, ಹಲವು ಸಕ್ಕರೆ ಕೈಗಾರಿಕೆಗಳನ್ನು ನಡೆಸುತ್ತಿದ್ದರು.ರಾಜ್‌ಮಹಲ್ ವಿಲಾಸದಲ್ಲಿರುವ ಸ್ವಗೃಹದಲ್ಲಿ ಗುರುವಾರ ಮಧ್ಯಾಹ್ನದವರೆಗೆ ಪಾರ್ಥಿವ ಶರೀರವನ್ನು ಇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

ಪ್ರತಿಕ್ರಿಯಿಸಿ (+)