ಮಾಜಿ ಸಚಿವ ಕೆ.ಎಚ್. ಆರ್ ಅಂತ್ಯಕ್ರಿಯೆ

7

ಮಾಜಿ ಸಚಿವ ಕೆ.ಎಚ್. ಆರ್ ಅಂತ್ಯಕ್ರಿಯೆ

Published:
Updated:

ಹಿರಿಯೂರು (ಚಿತ್ರದುರ್ಗ ಜಿಲ್ಲೆ): ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದ ಮಾಜಿ ಸಚಿವ ಕೆ.ಎಚ್. ರಂಗನಾಥ್ ಅವರ ಅಂತ್ಯಸಂಸ್ಕಾರವು ತಾಲ್ಲೂಕಿನ ಕಸವನಹಳ್ಳಿ ಸಮೀಪದ ಅವರ ತೋಟದಲ್ಲಿ ಸರ್ಕಾರಿ ಗೌರವದೊಂದಿಗೆ ಬುಧವಾರ ಮಧ್ಯಾಹ್ನ  ನಡೆಯಿತು.

 

ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್, ಡಿವೈಎಸ್ಪಿ  ಎನ್. ರುದ್ರಮುನಿ, ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಅವರು ರಂಗನಾಥ್ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿಟ್ಟು ಗೌರವ ಸಮರ್ಪಿಸಿದರು. ನಂತರ ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿದರು. ಪೊಲೀಸ್ ವಾದ್ಯಗೋಷ್ಠಿಯವರು ರಾಷ್ಟ್ರಗೀತೆ ನುಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry