ಮಂಗಳವಾರ, ಜೂನ್ 15, 2021
27 °C
ಆಯಾರಾಂ ಗಯಾರಾಂ

ಮಾಜಿ ಸಚಿವ ತೋಟ ನರಸಿಂಹಂ ಟಿಡಿಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ (ಪಿಟಿಐ): ಮಾಜಿ ಸಚಿವ ತೋಟ ನರಸಿಂಹಂ ಅವರು ಶುಕ್ರವಾರ ಕಾಂಗ್ರೆಸ್‌ ತ್ಯಜಿಸಿ ತೆಲುಗು ದೇಶಂ  ಪಕ್ಷ (ಟಿಡಿಪಿ) ಸೇರಿದರು. ಪೂರ್ವ ಗೋದಾವರಿ ಜಿಲ್ಲೆಗೆ ಸೇರಿದ ಕಾಪು ಸಮುದಾಯದ ಮುಖಂಡ ತೊೋಟ ಅವರು ಟಿಡಿಪಿ ಅಧ್ಯಕ್ಷ ಎನ್‌. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.



ಇಲ್ಲಿಯವರೆಗೆ ತೋಟ ಸೇರಿದಂತೆ ಕಿರಣ್‌ ಕುಮಾರ್‌ ರೆಡ್ಡಿ ಅವರ ಸಂಪುಟದಲ್ಲಿದ್ದ ಆರು ಸಚಿವರು ಕಾಂಗ್ರೆಸ್‌ ತ್ಯಜಿಸಿ ಅನ್ಯ ಪಕ್ಷ ಸೇರಿದ್ದಾರೆ. ಈ ಎಲ್ಲ ಮುಖಂಡರು ಸೀಮಾಂಧ್ರಕ್ಕೆ ಸೇರಿದವರು.



ರೆಡ್ಡಿ ಸಂಪುಟದಲ್ಲಿ ಸಚಿವರಾಗಿದ್ದ ಕಡಪ ಜಿಲ್ಲೆಯ ಡಿ.ಎಲ್‌. ರವೀಂದ್ರ ರೆಡ್ಡಿ ಅವರು ಚಂದ್ರಬಾಬು ನಾಯ್ಡು ಅವರನ್ನು ಶುಕ್ರವಾರ ಇಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಾರ್ಚ್‌ 25ರಂದು ಕಡಪದಲ್ಲಿ ನಡೆಯಲಿರುವ ಬೃಹತ್‌ ರ್‍ಯಾಲಿಯಲ್ಲಿ ಅಧಿಕೃತವಾಗಿ ಟಿಡಿಪಿ ಸೇರುವುದಾಗಿ ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.