ಮಾಜಿ ಸಚಿವ ರಾಮೇಗೌಡರ ಜನ್ಮದಿನಾಚರಣೆ

7

ಮಾಜಿ ಸಚಿವ ರಾಮೇಗೌಡರ ಜನ್ಮದಿನಾಚರಣೆ

Published:
Updated:
ಮಾಜಿ ಸಚಿವ ರಾಮೇಗೌಡರ ಜನ್ಮದಿನಾಚರಣೆ

ದೊಡ್ಡಬಳ್ಳಾಪುರ: ರೈತರ ನಾಡಿ ಮಿಡಿತ ಅರಿತಿದ್ದ ರಾಮೇಗೌಡರು ತಾಲ್ಲೂಕಿನ ಶೈಕ್ಷಣಿಕ ಮತ್ತು ಸಾಮಾಜಿಕ ಬದಲಾವಣೆಗಾಗಿ ದುಡಿದ ಧೀಮಂತ ರಾಜಕಾರಣಿ ಎಂದು ಕೊಂಗಾಡಿಯಪ್ಪ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಅಭಿಪ್ರಾಯಪಟ್ಟರು. ತಾಲ್ಲೂಕಿನ ಗಡ್ಡಂಬಚ್ಚಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಸೇವಾ ಸಂಘದ ವತಿಯಿಂದ ನಡೆದ ಜಿ.ರಾಮೇಗೌಡ ಅವರ 95ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ರಾಮೇಗೌಡರ  ಸಾಧನೆ ಕುರಿತು ಮಾತನಾಡಿದರು.ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ರಾಜ್ಯದ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ತಾಲ್ಲೂಕಿನ ಶೈಕ್ಷಣಿಕ ಮತ್ತು ಮೂಲ ಸೌಲಭ್ಯದ ಅಭಿವೃದ್ಧಿಗೆ  ಶ್ರಮಿಸಿದವರು ರಾಮೇಗೌಡರು.  ತಾಲ್ಲೂಕಿನಲ್ಲಿ ಹಲವು ಕೆರೆಗಳನ್ನು ನಿರ್ಮಿಸಿ ಜನಮನ್ನಣೆಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಜಿ.ರಾಮೇಗೌಡ ಅವರ ಪತ್ನಿ ಚನ್ನಮ್ಮ ಅವರನ್ನು ಅಭಿನಂದಿಸಲಾಯಿತು.ಜಿ.ಪಂ.ಮಾಜಿ ಸದಸ್ಯ ಎ.ನರಸಿಂಹಯ್ಯ ಅಧ್ಯಕ್ಷತೆವಹಿಸಿದ್ದರು.  ಜಿ.ಪಂ.ಸದಸ್ಯ ಎನ್.ಹನುಮಂತೇಗೌಡ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಅಪ್ಪಯ್ಯಣ್ಣ, ಕೆ.ಆರ್.ಆಂಜಿನಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಚಂದ್ರಪ್ಪ, ಅರಿವು ಪೌಂಡೇಷನ್‌ನ ಡಾ.ನಾರಾಯಣ್ ನಾಡಪ್ರಭು ಕೆಂಪೇಗೌಡ ಸೇವಾ ಸಂಘ ಅಧ್ಯಕ್ಷ ಎಚ್.ಚಂದ್ರಪ್ಪ,ಉಪಾಧ್ಯಕ್ಷ ಆಂಜನಗೌಡ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry