ಸೋಮವಾರ, ಸೆಪ್ಟೆಂಬರ್ 16, 2019
22 °C

ಮಾಜಿ ಸೈನಿಕರ ಸಂಘಟನೆಗೆ ಸಲಹೆ

Published:
Updated:

ಗದಗ: ಮಾಜಿ ಸೈನಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಮಾಜಿ ಸೈನಿಕರ ಸಂಘವನ್ನು ಬಲಪಡಿಸುವ ಅಗತ್ಯವಿದೆ ಎಂದು ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಎ.ಎಂ. ಯರಗೇರಿ ಸಲಹೆ ನೀಡಿದರು.ಸ್ಥಳೀಯ ವೀರನಾರಾಯಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಮಾಜಿ ಸೈನಿಕರ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಸೈನಿಕರು ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.ಮಾಜಿ ಸೈನಿಕರ ಸಮಸ್ಯೆ, ಬೇಡಿಕೆ ಈಡೇರಿಕೆಯ ಬಗ್ಗೆ, ಅವರ ಕುಟುಂಬ ಮತ್ತು ಮಕ್ಕಳ ಭವಿಷ್ಯದ ಪರಿಕಲ್ಪನೆ ಯನ್ನು ಇಟ್ಟುಕೊಂಡು ಸಂಘವು ಹಲವು ಯೋಜನೆಗಳನ್ನು ರೂಪಿಸಲು ಬದ್ಧ ವಾಗಿದೆ. ಅವುಗಳ ಜಾರಿಗೆ ಮಾಜಿ ಸೈನಿಕರ ಸಹಕಾರ ಅವಶ್ಯ ಎಂದು ಹೇಳಿದರು.ಸಂಘದ ಮಾಜಿ ಅಧ್ಯಕ್ಷರಾದ ಎಸ್.ಎಸ್. ಬಳ್ಳಾರಿ, ಚನ್ನಬಸಪ್ಪ ಆಸಿ, ಎ.ವಿ. ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಂಘದ ಗೌರವ ಕಾರ್ಯದರ್ಶಿ ಜಿ.ಬಿ. ಮಾಲಗಿತ್ತಿಮಠ ಅವರು ಕಳೆದ ಸಾಲಿನ ಸಂಘದ ವರದಿ ವಾಚನ ಮಾಡಿ ದರು. ಎಸ್.ಸಿ. ಚಳಗೇರಿ ಲೆಕ್ಕಪತ್ರವನ್ನು ಸಭೆಗೆ ಸಾದರ ಪಡಿಸಿದರು.ಕೆಂಭಾವಿಮಠ ಹಾಗೂ ಜಿಲ್ಲೆಯ ಮಾಜಿ ಸೈನಿಕರು, ವಿವಿಧ ತಾಲೂಕಾ ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಮಂಜುಶ್ರೀ ಪೆಂಟಾ ಹಾಗೂ ಸಹನಾ ಬಾಗೇವಾಡಿ ಪ್ರಾರ್ಥಿ ಸಿದರು. ಎಸ್.ಜಿ. ಕಲ್ಲಳ್ಳಿ ಸ್ವಾಗತಿ ಸಿದರು. ಡಿ.ವಿ. ಜೋಶಿ ನಿರೂಪಿಸಿದರು.

Post Comments (+)