ಸೋಮವಾರ, ಜೂನ್ 21, 2021
30 °C

ಮಾಜಿ ಸೈನಿಕ ಕೋಟಾದಲ್ಲಿ ಹುದ್ದೆ: ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಮಾಜಿ ಸೈನಿಕ ನಕಲಿ ಪ್ರಮಾಣಪತ್ರ ಪಡೆದು ಸರ್ಕಾರಿ ಪ್ರಾಥಮಿಕ ಶಾಲೆ­ಯಲ್ಲಿ ಸೇರಿದ್ದ 19 ಶಿಕ್ಷಕರ ಹುದ್ದೆ ಗಿಟ್ಟಿಸಿದ್ದ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂದು ಶಿಕ್ಷಣ ಸಚಿವರಿಗೆ ಭೂ ದಳದ ಮಾಜಿ ಸೈನಿಕ ಮಲ್ಲಣ್ಣ ಶಿರಡ್ಡಿ ಗೋಗಿ ಮನವಿ ಮಾಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿ­ರುವ ಅವರು, ನೇಮಕಾತಿ ಹೊಂದಿದ ಮೇಲೆ ಸಿಂಧುತ್ವ ಪ್ರಮಾಣ ಪತ್ರ ಪಡೆ­ಯುವಾಗ ಎಲ್ಲ ದಾಖಲೆಗಳು ಸಮಗ್ರ­ವಾಗಿ ತಪಾಸಣೆ ಮಾಡಿದ ನಂತರ ಕಾಯಂ ಸೇವೆ ಅವಕಾಶ ನೀಡುತ್ತಾರೆ. ಅಧಿಕಾರಿಗಳು ಅಕ್ರಮ ದಲ್ಲಿ ಶಾಮೀಲಾ­ಗಿದ್ದರಿಂದ ಎಂಟು ವರ್ಷಗಳಿಂದ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ ಎಂದು ದೂರಿದ್ದಾರೆ.ಶಿಕ್ಷಣ ಇಲಾಖೆಯಂತೆ ಇನ್ನಿತರ ಇಲಾಖೆಯಲ್ಲಿ ಮಾಜಿ ಸೈನಿಕ ಕೋಟಾ­ದಲ್ಲಿ ನೇಮಕಾತಿ ನಡೆದಿರುವ ಬಗ್ಗೆ ಶಂಕೆ ಇದೆ. ಆದ್ದರಿಂದ ನೌಕರರ ದಾಖಲಾತಿ­ಗಳನ್ನು ಪರಿಶೀಲಿಸಬೇಕು ಎಂದು  ಒತ್ತಾಯಿಸಿದ್ದಾರೆ.ಸೇವೆಯಿಂದ ವಜಾಗೊಳಿಸಿ ಎಫ್‌ಐಆರ್ ದಾಖಲಿ ಸುವಂತೆ ಡಿಡಿಪಿಐ ಅವರು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾ­ಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ದೂರು ದಾಖಲಿಸದೆ ಮೇಲಧಿಕಾರಿಗಳು ಆದೇಶವನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದಾರೆ ಆಯಾ ಕ್ಷೇತ್ರ ಶಿಕ್ಷಣಾ­ಧಿಕಾರಿಗಳ ವಿರುದ್ಧ ಕ್ರಮ ತೆಗೆದು­ಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.