ಶುಕ್ರವಾರ, ಜನವರಿ 17, 2020
22 °C

ಮಾಡಿದ್ದುಣ್ಣೋ ಮಾರಾಯ...

–ಅಶೋಕಕುಮಾರ್‌ ಅರ್ಕಸಾಲಿ,ಕಲಘಟಗಿ Updated:

ಅಕ್ಷರ ಗಾತ್ರ : | |

ಜನತೆ ಮೌಲ್ಯಮಾಪನ ಮಾಡಿದ್ದಾರೆ. ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಪದೇ ಪದೇ ಡೀಸೆಲ್ ಬೆಲೆ ಏರಿಸುತ್ತ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿಸಿದ್ದು, ಸೀಮೆಎಣ್ಣೆ, ಅಡುಗೆ ಅನಿಲ ಜನರಿಗೆ ಸುಲಭವಾಗಿ ಸಿಗದಂತೆ ಮಾಡಿದ್ದು, ಕೇಂದ್ರದಲ್ಲಿ ಮಿತಿ ಮೀರಿದ ಭ್ರಷ್ಟಾಚಾರ, ಅಧಿಕಾರಕ್ಕೆ ತಂದ ಕಾರ್ಯಕರ್ತರನ್ನು ಕಡೆಗಣಿಸುವುದು, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡದಿರುವುದು ಕಾಂಗ್ರೆಸ್‌ ಎಸಗಿದ ಪ್ರಮಾದ. ಅದರಿಂದಾಗಿ ಆ ಪಕ್ಷಕ್ಕೆ ಈ ದುರ್ಗತಿ ಬಂದಿದೆ.ಪಕ್ಷ ಸೇರಿದ ತಿಂಗಳಲ್ಲೇ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಸಿಗಬೇಕು. ಶಾಸಕನಾದ ಒಂದು ವಾರದಲ್ಲೇ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕು. ಹಾಗಾದರೆ ಐದು ವರ್ಷ ಸರ್ಕಾರಿ ಸವಲತ್ತು ಪಡೆದು ಆರಾಮ ಆಗಿರಬಹುದು. ಇದು ನಮ್ಮ ಬಹುಪಾಲು ರಾಜಕಾರಣಿಗಳ ಮನಸ್ಥಿತಿ.ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾರ್ಯಕರ್ತರನ್ನು ಮರೆಯುತ್ತಾರೆ.  ಬಿಟ್ಟಿ ದುಡಿಯುವ ಕಾರ್ಯಕರ್ತರಿಗೆ ನಿಗಮ–ಮಂಡಳಿಗಳಲ್ಲಿ ಸ್ಥಾನ ನೀಡಲು ಮೀನ–ಮೇಷ ಎಣಿಸುತ್ತಾರೆ. ಹಿರಿಯರು, ನಿಷ್ಠರನ್ನು ಕಡೆಗಣಿಸುವುದು ಪಕ್ಷ ಮೂಲೆಗುಂಪಾಗಲು ಕಾರಣ. ಇದು ಎಲ್ಲ ಪಕ್ಷಗಳಿಗೂ ಅನ್ವಯಿಸುವ ಮಾತು.ರಾಜ್ಯದಲ್ಲೂ ಅಷ್ಟೇ, ಶಾಸಕರು ಹಾಗೂ ಮಂತ್ರಿಗಳು ಜನತೆಗೆ ಸ್ಪಂದಿಸದಿದ್ದರೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸದಿದ್ದರೆ, ನಾಡಿನ ಮತದಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತಾನೆ. ಆದ್ದರಿಂದ ಮೊದಲೇ ಎಚ್ಚೆತ್ತುಕೊಳ್ಳುವುದು ಸೂಕ್ತ.

 

ಪ್ರತಿಕ್ರಿಯಿಸಿ (+)