ಶನಿವಾರ, ನವೆಂಬರ್ 16, 2019
22 °C
ಸರಣಿ-12

ಮಾಡಿ ನಲಿ

Published:
Updated:
ಮಾಡಿ ನಲಿ

ಪಾತ್ರೆಯಲ್ಲಿ ಎಷ್ಟು ತುಂಬಬಹುದು?ಪ್ರಶ್ನೆ

1. ಗೋಲಿ ಗುಂಡುಗಳಿಂದ ಪೂರ್ಣ ತುಂಬಿದ ಕಪ್‌ನಲ್ಲಿ ಮರಳು ಮತ್ತು ನೀರು ಹೇಗೆ ಹೋಯಿತು?

2. ನೀರಿನಿಂದ ಸಂಪೂರ್ಣ ತುಂಬಿದ ಬಟ್ಟಲಿನಲ್ಲಿ ಗೋಲಿ ಗುಂಡುಗಳು ಹಾಗೂ ಮರಳನ್ನು ತುಂಬಲು ಸಾಧ್ಯವೇ?ಉತ್ತರ

1. ಗೋಲಿ ಗುಂಡುಗಳ ಮಧ್ಯದಲ್ಲಿ ಸಾಕಷ್ಟು ಖಾಲಿ ಸ್ಥಳವಿದೆ. ಮರಳಿನ ಕಣಗಳು ಚಿಕ್ಕವಿರುವುದರಿಂದ ಅವು ಖಾಲಿ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ನೀರಿನ ಕಣಗಳು ಬಹಳ ಚಿಕ್ಕವಾದ್ದರಿಂದ ಅವು ಮರಳಿನ ಮಧ್ಯದಲ್ಲಿನ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ಹೀಗೆ ತುಂಬಿದ ಪಾತ್ರೆಯಲ್ಲಿ ಬೇರೆ ವಸ್ತುಗಳನ್ನು ತುಂಬಲು ಸಾಧ್ಯ.2. ನೀರಿನಲ್ಲಿ ಅಂತರಾಣ್ವಕ ಸ್ಥಳವು ಅತ್ಯಂತ ಚಿಕ್ಕದಿದ್ದು, ಅದರಲ್ಲಿ ಗೋಲಿ ಗುಂಡುಗಳು ಹಾಗೂ ಮರಳಿನ ಕಣಗಳು ಹೋಗುವುದಿಲ್ಲ. ಪೂರ್ಣ ನೀರು ತುಂಬಿದ ಪಾತ್ರೆಯಲ್ಲಿ ಯಾವುದೇ ಘನ ವಸ್ತುವನ್ನು ಹಾಕಿದರೂ ಅದು ನೀರನ್ನು ಹೊರ ಚೆಲ್ಲುತ್ತದೆ.ಸಾಮಗ್ರಿಗಳು: ಪ್ಲಾಸ್ಟಿಕ್ ಅಥವಾ ಗಾಜಿನ ಬಟ್ಟಲುಗಳು, ಗೋಲಿ ಗುಂಡುಗಳು, ಮರಳು, ನೀರು.ವಿಧಾನ:

1
. ಚಿತ್ರದಲ್ಲಿ ತೋರಿಸಿದಂತೆ ಒಂದು ಪ್ಲಾಸ್ಟಿಕ್ ಅಥವಾ ಗಾಜಿನ ಬಟ್ಟಲಿನಲ್ಲಿ, ಅಂಚಿನವರೆಗೆ ಗೋಲಿ ಗುಂಡುಗಳನ್ನು ತುಂಬಿ.2. ಅನಂತರ ಅದರಲ್ಲಿ ಮರಳನ್ನು ಹಾಕುತ್ತಾ ಹೋಗಿ. ಬಟ್ಟಲನ್ನು ನೆಲಕ್ಕೆ ಸಾವಕಾಶವಾಗಿ ತಟ್ಟಿ ಮತ್ತೆ ಮರಳು ಹಾಕಿ. ಹೀಗೆ ಅಂಚಿನವರೆಗೆ ಮರಳು ತುಂಬುವವರೆಗೂ ಮಾಡಿ.3. ಈ ಬಟ್ಟಲಿಗೆ ಮತ್ತೆ ನೀರನ್ನು ಸಾವಕಾಶವಾಗಿ ಹಾಕಿ. ನೀರು ಕೂಡ ಅಂಚಿನವರೆಗೆ ಬರಲಿ.

ಪ್ರತಿಕ್ರಿಯಿಸಿ (+)