ಗುರುವಾರ , ಮೇ 19, 2022
20 °C

ಮಾಣಿ ಜಂಕ್ಷನ್: ವೃತ್ತ ನಿರ್ಮಾಣಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಎಂಬಲ್ಲಿಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಅವ್ಯವಸ್ಥೆಯಿಂದ ಕೂಡಿದ್ದು, ಜಂಕ್ಷನ್‌ನಲ್ಲಿ ಒಂದು ವೃತ್ತ ನಿರ್ಮಿಸಬೇಕೆಂಬ ಬೇಡಿಕೆ ಇದುವರೆಗೂ ಕನಸಾಗಿಯೇ ಉಳಿದಿದೆ.ಮಾಣಿ ಎಂಬಲ್ಲಿ ಮಾಣಿ ಬಾಲವಿಕಾಶ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಮಾದರಿ ಶಾಲೆ, ಕರ್ನಾಟಕ ಪದವಿಪೂರ್ವ ಕಾಲೇಜು, ಕರ್ನಾಟಕ ಪ್ರೌಢಶಾಲೆಗಳು ಒಂದೇ ಬದಿಯಲ್ಲಿ ಕಾರ್ಯಚರಿಸುತ್ತಿದ್ದು, ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಈ ಪ್ರದೇಶದಲ್ಲಿದ್ದಾರೆ.ಶಾಲಾ ಬಿಡುವ ಹೊತ್ತಿನಲ್ಲಿ ಅತೀ ವೇಗವಾಗಿ ವಾಹನಗಳು ಸಾಗುತ್ತವೆ. ಮಳೆಗಾಲದಲ್ಲಿ ಕತ್ತಲು ಆವರಿಸುವುದರಿಂದ ಈ ರಸ್ತೆಯಲ್ಲಿ ವಾಹನಗಳು ಬರುವುದುಕಾಣುವುದಿಲ್ಲ. ಪರಿಣಾಮವಾಗಿ ಭಯದ ವಾತಾವರಣದ ನಡೆದಾಡುವಂತಾಗಿದೆ ಎಂದು ಸಾರ್ವಜನಿಕರು ಪ್ರಜಾವಾಣಿಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.ಮಾಣಿ ಜಂಕ್ಷನ್‌ನಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಆದ್ದರಿಂದ ಇಲ್ಲಿ ವೃತ್ತ ನಿರ್ಮಾಣವಾಗಬೇಕು ಎಂಬ ಗ್ರಾಮಸ್ಥರ ಬೇಡಿಕೆಯನ್ನು ಸಂಬಂಧಿಸಿದ ಇಲಾಖೆ ಈಡೇರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಮಾಣಿ-ಮೈಸೂರು ರಾಜ್ಯ ಹೆದ್ದಾರಿ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರಿ ವಾಹನಗಳೂ ಸಂಚರಿಸುತ್ತವೆ. ಈ ಪ್ರದೇಶದಲ್ಲಿ ಎಚ್ಚರಿಕೆಯ ಫಲಕವನ್ನೂ ಇಲಾಖೆ ಹಾಕಿಲ್ಲ.ಈ ಪ್ರದೇಶ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಟ್ಟಿದ್ದು, ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿಯನ್ನೂ ನೇಮಿಸಿಲ್ಲ  ಚಾಲಕರೊಬ್ಬರು ದೂರಿದ್ದಾರೆ.ಈ ಪ್ರದೇಶದಲ್ಲಿ ನೂರಾರು ಅಂಗಡಿಗಳು, ಬ್ಯಾಂಕ್, ದೂರವಾಣಿ ಕಚೇರಿ, ಶಾಲೆ- ಮದ್ರಸಗಳು ಇವೆ. ಕೆಲವು ಬಾಡಿಗೆ ವಾಹನಗಳ ತಂಗುದಾಣವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಇತ್ತೀಚೆಗೆ ಬದಲಾಯಿಸಿದ್ದು, ಇದರಿಂದ ಈ ಪ್ರದೇಶದಲ್ಲಿ ಮತ್ತಷ್ಟು ಅಪಘಾತಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಮಾಣಿ ಜಂಕ್ಷನ್ ಬಳಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಸ್ತೆ ಬದಿಯ ಕಲ್ಲು ಹಾಗೂ ಮಣ್ಣುಗಳನ್ನು ರಸ್ತೆ ಬದಿಯಲ್ಲಿ ಹಾಕಿದ್ದರಿಂದ ಇಲ್ಲಿ ವಿದ್ಯಾರ್ಥಿಗಳು ಸಂಚಾರಿಸಲು ಭಯಪಡುತ್ತಿದ್ದಾರೆ.

ಇಲ್ಲಿ ಸುಸಜ್ಜಿತ ವೃತ್ತ ನಿರ್ಮಿಸಬೇಕು. ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಫುಟ್‌ಪಾತ್ ನಿರ್ಮಿಸ ಬೇಕು. ಬಾಡಿಗೆ ವಾಹನಗಳನ್ನು ಶಾಲೆ ರಸ್ತೆಯಿಂದ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.