ಮಾತನಾಡುವುದೇ ಸಾಧನೆ ಆಗಬಾರದು

7

ಮಾತನಾಡುವುದೇ ಸಾಧನೆ ಆಗಬಾರದು

Published:
Updated:

ಶಿವಮೊಗ್ಗ: ಕೇವಲ ಮಾತನಾಡುವುದೇ ಸಾಧನೆ ಆಗಬಾರದು; ನಾವು ಮಾಡಿದ ಸಾಧನೆ ಮಾತನಾಡಬೇಕು ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.ಶುಕ್ರವಾರ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಯುವದಸರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಾವು ಮಾಡುವ ಸಾಧನೆ ಇತರರಿಗೆ ಮಾದರಿ ಆಗಬೇಕು. ಕುಟುಂಬದ ಹಿರಿಯರು ತಮ್ಮ ಮಕ್ಕಳಿಗೆ ಜೀವನದಲ್ಲಿ ಉತ್ತಮ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸಿ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.ರಾಜ್ಯ ಸಭೆ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಜಿಲ್ಲೆಯ ಸಂಸ್ಕೃತಿ ವಿಶಿಷ್ಟವಾದುದು  ಶಿವಮೊಗ್ಗ ಇತಿಹಾಸದಲ್ಲಿ  ಸಾಹಿತ್ಯ, ಕಲೆ, ಧರ್ಮ, ಸಂಸ್ಕೃತಿಗೆ ಮಹತ್ವವಾದ ನೆಲೆಗಟ್ಟಿದೆ. ನಮ್ಮ ಹಿರಿಯರು ಮಾಡಿರುವ ಸಾಧನೆಯನ್ನು ಬದಿಗಿಡುವ ಪೀಳಿಗೆ ನಿರ್ಮಾಣ ಆಗಬೇಕು.

 

ಈ ಕಾರ್ಯಕ್ಕೆ ಯುವ ದಸರಾ ಉತ್ತಮ ವೇದಿಕೆ ಆಗಲಿ, ಯುವ ದಸರಾ ಕೇವಲ ಮನರಂಜನಾ ಕಾರ್ಯಕ್ರಮ ಆಗದೇ, ಯುವಕರಲ್ಲಿ ಉತ್ಸಾಹ ತುಂಬುವ ಕಾರ್ಯ ಮಾಡಲಿ ಎಂದು ಹೇಳಿದರು.ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಡಾ.ಎಸ್. ನಾಗೇಂದ್ರ, ಏಕಲವ್ಯ ಪ್ರಶಸ್ತಿ ವಿಜೇತರಾದ ವಿ. ನೇತ್ರಾವತಿ, ಎನ್.ಎಚ್. ಚಂದ್ರಶೌರಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry