ಮಾತಿಗಿಂತ ಕೃತಿ ಮುಖ್ಯ: ಅಡ್ವಾಣಿ

7

ಮಾತಿಗಿಂತ ಕೃತಿ ಮುಖ್ಯ: ಅಡ್ವಾಣಿ

Published:
Updated:

ಭೋಪಾಲ್‌/ಗಾಂಧಿನಗರ: ‘ಇಂದು ಬಿಜೆಪಿ ಈ ಘಟ್ಟ ವನ್ನು ತಲುಪಿದೆ ಎಂದಾದರೆ ಅದಕ್ಕೆ ಪಕ್ಷದ ಕಾರ್ಯ ಕರ್ತರ ಕಠಿಣ ಪರಿಶ್ರಮವೇ ಕಾರಣ ಹೊರತು ಮಾತಿನ ಮೋಡಿಯಲ್ಲ’ ಎಂದು ಅಡ್ವಾಣಿ ಅವರು ನಯ ವಾಗಿಯೇ ಮೋದಿಯನ್ನು ಚುಚ್ಚಿದರು.

‘ಕೇವಲ ಮಾತಿನ ಬಂಡವಾಳದ ಮೇಲೆ ಚುನಾ ವಣೆ ಗೆಲ್ಲಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಕಠಿಣ ಪರಿ ಶ್ರಮ ಕೂಡ ಬೇಕಾಗುತ್ತದೆ’ ಎಂದೂ ಕಿವಿಮಾತು ಹೇಳಿದರು.ಈ ಹಿಂದೆ ಕೇಂದ್ರದಲ್ಲಿ ಅಧಿಕಾರ ದಲ್ಲಿದ್ದ  ಎನ್‌ಡಿಎ ಸರ್ಕಾರದ ಸಾಧನೆ ಯನ್ನು ಹೊಗಳಿಸಿದ ಅಡ್ವಾಣಿ, ವಿವಿಧ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳ ಸಾಧನೆಯನ್ನು ಹೊಗಳುವುದಕ್ಕೂ ಮರೆಯಲಿಲ್ಲ. ಮೋದಿ, ಶಿವರಾಜ್‌ ಸಿಂಗ್‌ ಚೌಹಾಣ್‌, ಛತ್ತೀಸ ಗಡ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರ ಕೆಲಸವನ್ನು ಕೂಡ ಶ್ಲಾಘಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry