ಸೋಮವಾರ, ಏಪ್ರಿಲ್ 12, 2021
22 °C

ಮಾತಿಗೆ ತಪ್ಪಿದ ಬಿಜೆಪಿ ಮುಖಂಡರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ಹಾಲು ಒಕ್ಕೂಟದಲ್ಲಿ ಹಾಲು ಸಂಗ್ರಹ ಘಟಕ ಸ್ಥಾಪಿಸಲು ರೂ. 10 ಕೋಟಿ ಅನುದಾನ ಕೊಡಿಸುವುದಾಗಿ ಜಿಲ್ಲಾ ಬಿಜೆಪಿ ಮುಖಂಡರು ನೀಡಿದ್ದ ಭರವಸೆಯನ್ನು ಇನ್ನೂ ಈಡೇರಿಸದೆ, ಮಾತಿಗೆ ತಪ್ಪಿದ್ದಾರೆ ಎಂದು ಒಕ್ಕೂಟದ ನಿರ್ದೇಶಕ ನಾಗೇಶ ಬಾಬು ಆರೋಪಿಸಿದರು.ಒಕ್ಕೂಟದ ಅಧ್ಯಕ್ಷರ ಚುನಾವಣೆಯಲ್ಲಿ ಶಿವನಂಜಪ್ಪ ಅವರನ್ನು ಅವಿರೋಧ ಆಯ್ಕೆ ಮಾಡಿದರೆ, ಒಕ್ಕೂಟಕ್ಕೆ ಸರ್ಕಾರದಿಂದ ರೂ. 10 ಕೋಟಿ ಅನುದಾನ ಕೊಡಿಸುವುದಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅಶ್ವತ್ಥನಾರಾಯಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಶಿವಪ್ರಸಾದ್ ಭರವಸೆ ನೀಡಿದ್ದರು. ಇವರ ಮಾತಿಗೆ ಒಪ್ಪಿ ಎ.ಎಸ್.ಮೂಡಲಗಿರಿಯಪ್ಪ ಮತ್ತು ತಾನು ಚುನಾವಣಾ ಕಣದಿಂದ ನಿರ್ಗಮಿಸಿ, ಅವಿರೋಧ ಆಯ್ಕೆಗೆ ನೆರವಾಗಿದ್ದೆವು. ರಾಜ್ಯ ಬಜೆಟ್‌ನಲ್ಲೂ ಅನುದಾನ ನೀಡುವ ಬಗ್ಗೆ ಪ್ರಸ್ತಾಪವಾಗಿಲ್ಲ. ಈ ಬಗ್ಗೆ ಮುಖಂಡರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.ಈ ಹಿಂದೆ ತಾವು ನೀಡಿರುವ ಭರವಸೆಯನ್ನು ಕಾರ್ಯರೂಪಕ್ಕೆ ತರಲು ವಾರದೊಳಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಒಕ್ಕೂಟದ ನಿರ್ದೇಶಕರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಅಹವಾಲು ಸಲ್ಲಿಸಲಿದೆ ಎಂದು ಎಚ್ಚರಿಕೆ ನೀಡಿದರು.ಕೆಎಂಎಫ್‌ನಿಂದ ಪೂರೈಕೆ ಆಗುತ್ತಿರುವ ಪಶು ಆಹಾರದಲ್ಲೂ ಗುಣಮಟ್ಟ ಕಡಿಮೆಯಾಗುತ್ತಿದೆ. ಎರಡು ವರ್ಷಗಳ ಹಿಂದೆ ಇದ್ದ ಗುಣಮಟ್ಟ ಈಗ ಕಂಡುಬರುತ್ತಿಲ್ಲ. ಅಲ್ಲದೆ ಜಿಲ್ಲೆಗೆ 4 ಲಕ್ಷ ಟನ್ ಪಶು ಆಹಾರ ಬೇಡಿಕೆ ಇದೆ. ಆದರೆ, 3 ಸಾವಿರ ಟನ್ ಮಾತ್ರ ಪೂರೈಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.