ಮಾತುಕತೆಗೆ ಸಿದ್ಧ: ಇರಾನ್ ಹೇಳಿಕೆ

7

ಮಾತುಕತೆಗೆ ಸಿದ್ಧ: ಇರಾನ್ ಹೇಳಿಕೆ

Published:
Updated:

ಟೆಹರಾನ್ (ಪಿಟಿಐ): `ಮಾತುಕತೆಯ ಮಹತ್ವದ ಬಗ್ಗೆ ನಮಗೆ ಅರಿವಿದೆ. ಧನಾತ್ಮಕ ನಡೆ ಮತ್ತು ಸಹಕಾರ ತತ್ವದಲ್ಲಿ ನಂಬಿಕೆಯೂ ಇದೆ. ಆದ್ದರಿಂದ ಮಾತುಕತೆ ವೇದಿಕೆಗೆ ಬರಲು ಸಿದ್ಧ~ ಎಂಬ ಇರಾನ್ ವಿದೇಶಾಂಗ ಸಚಿವರ ವಕ್ತಾರ ಮೆಹಮಾನ್‌ಪರಾಸಟ್ ಅವರ ಹೇಳಿಕೆಯನ್ನು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.ಐರೋಪ್ಯ ಒಕ್ಕೂಟದ ವಿದೇಶಾಂಗ ನೀತಿಯ ಮುಖ್ಯಸ್ಥ ಕ್ಯಾಥರಿನ್ ಆಶ್ಟನ್ ಕಳೆದ ಅಕ್ಟೋಬರ್‌ನಲ್ಲಿ ಮಾತುಕತೆಗೆ ಬರುವಂತೆ ಬರೆದ ಪತ್ರಕ್ಕೆ ಬುಧವಾರ ಪ್ರತಿಕ್ರಿಯಿಸಿದೆ.`ಇರಾನ್ ಪತ್ರ ಗುರುವಾರ ತಲುಪಿದ್ದು, ಅದನ್ನು ಅಧ್ಯಯನ ಮಾಡಲಾಗುತ್ತಿದೆ~ ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry