ಮಾತುಕತೆ ಸಿದ್ಧ: ಬಿಸಿಸಿಐ

7

ಮಾತುಕತೆ ಸಿದ್ಧ: ಬಿಸಿಸಿಐ

Published:
Updated:

ನವದೆಹಲಿ (ಪಿಟಿಐ): `ಸಹಾರಾ ಪುಣೆ ವಾರಿಯರ್ಸ್ ತಂಡದ ಮಾಲೀಕರೊಂದಿಗೆ ಸಮಾಲೋಚನೆ ನಡೆಸಲು ನಾವು ಸಿದ್ಧರಾಗಿದ್ದೇವೆ. ಆದರೆ ಫ್ರಾಂಚೈಸಿಗಳಿಗಾಗಿ ನಾವು ಐಪಿಎಲ್ ನಿಯಮ ಸಡಿಲಿಸಲು ಸಿದ್ಧರಿಲ್ಲ~ ಎಂದು ಬಿಸಿಸಿಐ ತಿಳಿಸಿದೆ.`ಸಹಾರಾ ಅಡ್ವೆಂಚರ್   ಸ್ಪೋರ್ಟ್ಸ್ ಲಿಮಿಟೆಡ್ ಪ್ರಕಟಣೆ ಹೊರಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ತಿಳಿಸಲಾಗಿದೆ. ಆದರೆ ಸದ್ಯದಲ್ಲಿಯೇ ಈ ಸಮೂಹದ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಲು ಸಿದ್ಧರಿದ್ದೇವೆ~ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ನುಡಿದಿದ್ದಾರೆ.

`ಆಟಗಾರರ ವರ್ಗಾವಣೆಯಲ್ಲಿ ಮತ್ತೊಬ್ಬನನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಿತ್ತು~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry