ಮಾತು ಮುಗಿಸಿದ ಅಣ್ಣಾಬಾಂಡ್

7

ಮಾತು ಮುಗಿಸಿದ ಅಣ್ಣಾಬಾಂಡ್

Published:
Updated:

ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ `ಅಣ್ಣಾ ಬಾಂಡ್~ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿತು.`ತುಂಬಾ ನೋಡ್ಬೇಡಿ ಲವ್ ಆಯ್ತದೆ ಹೂವ ಕೊಡ್ಬೇಡಿ ಮದುವೆ ಆಯ್ತದೆ~ ಎಂಬ ಗೀತೆಯನ್ನು ಇತ್ತೀಚೆಗೆ ಇಮ್ರಾನ್ ನೃತ್ಯ ನಿರ್ದೇಶನದೊಂದಿಗೆ ಪುನೀತ್ ರಾಜ್‌ಕುಮಾರ್, ಪ್ರಿಯಾಮಣಿ ಅಭಿನಯದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.ಶ್ರಿರಂಗಪಟ್ಟಣ, ಮೇಲುಕೋಟೆ ಸುತ್ತಮುತ್ತ ಹಲವು ಸನ್ನಿವೇಶಗಳನ್ನು ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ ನಿರ್ದೇಶಕ ಸೂರಿ ಚಿತ್ರಿಸಿಕೊಂಡರು. ಚಿತ್ರಕ್ಕೆ ಮೂರು ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಫೆ.14ರಿಂದ ಮಾತಿನ ಮರುಲೇಪನ ಆರಂಭವಾಗಿದೆ.

 

ಚಿತ್ರಕ್ಕೆ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಸಾಹಿತ್ಯ, ಹರಿಕೃಷ್ಣ ಸಂಗೀತ, ಸತ್ಯಹೆಗ್ಡೆ ಛಾಯಾಗ್ರಹಣ, ಇಮ್ರಾನ್ ನೃತ್ಯ, ರವಿವರ್ಮ ಸಾಹಸ, ಶಶಿಧರ್ ಅಡಪ ಕಲೆ, ದೀಪು ಎಸ್ ಕುಮಾರ್ ಸಂಕಲನ, ಗಡ್ಡ ವಿಜಯ್ ನಿರ್ದೇಶನ ಸಹಕಾರ, ಚೆನ್ನಾ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ್ ನಿರ್ಮಾಣ-ನಿರ್ವಹಣೆಯಿದ್ದು, ಚಿತ್ರದ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಸೂರಿ ಅವರದು. ತಾರಾಗಣದಲ್ಲಿ ಪುನೀತ್ ರಾಜ್‌ಕುಮಾರ್, ಪ್ರಿಯಾಮಣಿ, ನಿಧಿ ಸುಬ್ಬಯ್ಯ, ಜಾಕಿಶ್ರಾಫ್, ಗುರುದತ್, ಅವಿನಾಶ್, ಸುಮಿತ್ರಾ, ಅಚ್ಯುತ್‌ರಾವ್, ಜಾನ್ ಕುಕ್ಕಿನ್, ಪಸುಪತಿ, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ, ನೀನಾಸಂ ಸತೀಶ್, ಅಪೂರ್ವ, ಪ್ರಶಾಂತ್ ಸಿದ್ದಿ, ಜಯಶ್ರಿ, ವರ್ಷಾ ಕೃಷ್ಣ ಮುಂತಾದವರಿದ್ದಾರೆ.

 

`ಬೆಳಕಿನಡೆಗೆ~ ಚಿತ್ರಮಂದಿರದ ಕಡೆಗೆ     

ರಮೇಶ್‌ಕುಮಾರ್ ಜೈನ್ ನಿರ್ಮಿಸಿರುವ `ಬೆಳಕಿನಡೆಗೆ~ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ `ಯು~ ಅರ್ಹತಾ ಪತ್ರವನ್ನು ನೀಡಿದೆ. ಅಜಯಕುಮಾರ್.ಎ.ಜೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಮಕ್ಕಳ ಚಿತ್ರಕ್ಕೆ ಕೆಂಗೇರಿ, ಬಿಡದಿ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.ಇತ್ತೀಚೆಗಷ್ಟೇ ನಿಧನರಾದ ಕರಿಬಸವಯ್ಯ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ಹಾಡನ್ನು ಹಾಡಿದ್ದಾರೆ. ರಾಮಕೃಷ್ಣ, ಗುರುರಾಜ ಹೊಸಕೋಟೆ, ಕಾಶಿ, ಮೋಹನ್ ಜುನೇಜಾ, ಚಂಪಾ ಶೆಟ್ಟಿ, ಸುಚಿತ್ರ, ಮಾ.ಚಿರಂಜೀವಿ, ಮಾ.ಮಂಜುನಾಥ್, ಮಾ.ಶ್ಯಾಂ, ಮಾ.ಅರ್ಜುನ್, ಬೇಬಿ ಸಾನಿಯಾ ಅಯ್ಯರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry