ಮಾತೃಪ್ರೇಮ ಮೆರೆದ ಬೀದಿ ನಾಯಿ

7

ಮಾತೃಪ್ರೇಮ ಮೆರೆದ ಬೀದಿ ನಾಯಿ

Published:
Updated:
ಮಾತೃಪ್ರೇಮ ಮೆರೆದ ಬೀದಿ ನಾಯಿ

ಬಳ್ಳಾರಿ:  ನಾಯಿಯೊಂದು ಅದರ ಮರಿಯ ಅಂತ್ಯಸಂಸ್ಕಾರ ಮಾಡಿದ ಅಪರೂಪದ ಪ್ರಕರಣ ಇದು.ನಗರದ ಹಳೆ ಬಸ್ ನಿಲ್ದಾಣದ ಎದುರಿನ ಕೋಲಾಚಲಂ ಕಾಂಪೌಂಡ್ ಗುರುವಾರ ಸಂಜೆ ನಡೆದ ಈ ಪ್ರಕರಣ ನೋಡುಗರ ಕರುಳು ಚುರುಕ್ ಎನ್ನುವಂತೆ ಮಾಡಿತು.ಇತ್ತೀಚೆಗಷ್ಟೇ ಜನಿಸಿದ್ದ ಮರಿಯೊಂದು ಕಾರೊಂದು ಹಾದು ಹೋದುದರಿಂದ ಮೃತಪಟ್ಟಿದ್ದನ್ನು ಕಂಡ ಆ ತಾಯಿ ನಾಯಿಯು ಮರಿಯ ಶವದೆದುರು ಕುಳಿತು ಸ್ವಲ್ಪ ಹೊತ್ತು ರೋದಿಸಿತು. ಮರಿ ಸತ್ತಿದ್ದ ಸ್ಥಳದ ಸಮೀಪದಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ಇರಿಸಲಾಗಿದ್ದ ಉಸುಕನ್ನು ಮರಿಯ ಶವದ ಮೇಲೆ ಕಾಲಿನಿಂದ ಎಳೆದು ಹಾಕಿ ತಾನೇ ಅಂತ್ಯಸಂಸ್ಕಾರವನ್ನೂ ನೆರವೇರಿಸಿತು.ಕಪ್ಪುಬಣ್ಣದ ಮುದ್ದಾದ ಮರಿ ಮೇಲೆ ಕಾರು ಹಾದುಹೋದದ್ದನ್ನು ಕಂಡಕೂಡಲೇ ವಿಚಲಿತಗೊಂಡಿತು. ವಿಲವಿಲ ಒದ್ದಾಡುತ್ತಿದ್ದ ಮರಿಯ ಬಳಿ ಯಾರೂ ಸುಳಿಯದಂತೆ ನೋಡಿಕೊಂಡಿತು. ಯಾರಾದರೂ ಹತ್ತಿರಕ್ಕೆ ಹೋದರೆ `ಗುರ್~ ಎಂದು ಹೆದರಿಸುತ್ತಿದ್ದ ತಾಯಿ ಶ್ವಾನ, ಸ್ವಲ್ಪ ಹೊತ್ತಿನ ನಂತರ ಕೊನೆಯುಸಿರೆಳೆದ ಮರಿಯೆದುರು ಕುಳಿತು ಹಿಂಭಾಗದಿಂದ ಉಸುಕನ್ನು ಎಳೆದು ಕೊನೆಗೆ ಮುಖವನ್ನು ಮುಚ್ಚಿ ಅಂತ್ಯ ಸಂಸ್ಕಾರ ನೆರವೇರಿಸಿತು.

 

ಸಂಜೆ 5ರ ವೇಳೆಗೆ ಇಷ್ಟೆಲ್ಲಾ ಬೆಳವಣಿಗೆಗಳು ಮುಗಿದರೂ ರಾತ್ರಿ 7ರವರೆಗೂ ಆ ಉಸುಕಿನ ಬಳಿಯೇ ತಾಯಿ ನಾಯಿ ಕುಳಿತು ಕಣ್ಣೀರು ಸುರಿಸಿತು. ಇನ್ನೊಂದು ನಾಯಿಯೂ ಜತೆಗೂಡಿ ಶೋಕ ಆಚರಿಸಿತು. ಈ ದೃಶ್ಯವನ್ನು ಕಂಡ ದಾರಿಹೋಕರು ಮಮ್ಮಲ ಮರುಗಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry