ಶುಕ್ರವಾರ, ನವೆಂಬರ್ 15, 2019
26 °C

ಮಾದಂಡ ಹಾಕಿ ಕಪ್: ಅಚ್ಚಪಂಡ ತಂಡಕ್ಕೆ ಜಯ

Published:
Updated:

ವಿರಾಜಪೇಟೆ: ಅಚ್ಚಪಂಡ ತಂಡವು ಬಾಳುಗೋಡಿನಲ್ಲಿ ನಡೆಯುತ್ತಿರುವ ಮಾದಂಡ ಕಪ್ -2013 ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಗುರುವಾರ ರೋಚಕ ಜಯ ಸಾಧಿಸಿತು.ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಅಚ್ಚಪಂಡ ತಂಡವು 3-2 ಗೋಲುಗಳಿಂದ ಕುಯಿಮಂಡ ವಿರುದ್ಧ ಗೆಲುವು ಸಾಧಿಸಿತು.

ಅಚ್ಚಪಂಡ ತಂಡದ ಪರವಾಗಿ ಮಂಜು ಉತ್ತಪ್ಪ(12ನೇ ನಿಮಿಷ), ನಿರೋಶ್(39ನೇ ನಿ.), ಮಾಚಯ್ಯ(49ನೇ ನಿ) ತಲಾ ಒಂದು ಗೋಲು ಗಳಿಸಿದರು. ಕುಯಿಮಂಡ ಪರವಾಗಿ ರಾಕೇಶ್(11ನೇ ನಿ) ಒಂದು ಗೋಲು ಮತ್ತು ಸ್ವಯಂ ಗೋಲು ದಾಖಲಾಯಿತು.ಇನ್ನೊಂದು ಪಂದ್ಯದ ಟೈ ಬ್ರೇಕರ್‌ನಲ್ಲಿ ನಾಮೇರ ತಂಡವು 3-0ಯಿಂದ ಕರ್ತಮಾಡ ವಿರುದ್ಧ ಜಯ ಗಳಿಸಿತು. ವಿಜೇತ ತಂಡದ ಪರವಾಗಿ ವರುಣ್, ಅಚ್ಚಯ್ಯ ಮತ್ತು ಪೂವಣ್ಣ ಗೋಲು ಬಾರಿಸಿದರು.ಇನ್ನುಳಿದ ಪಂದ್ಯಗಳಲ್ಲಿ; ಬೊಳ್ಳಚಂಡ ತಂಡವು 4-0ಯಿಂದ ಮಲ್ಲಮಾಡದ ವಿರುದ್ಧ; ಕಂಬೆಯಂಡ ತಂಡವು, 4-3ರಿಂದ ಮೆಚ್ಚಿಯಂಡ ವಿರುದ್ಧ; ಅಮ್ಮಂಡ ತಂಡವು 4-0ಯಿಂದ ಅಪ್ಪಚೆಟ್ಟೊಳಂಡ  ವಿರುದ್ಧ; ಕುಪ್ಪಂಡ ತಂಡವು ಅಚ್ಚಕಳಿರ ವಿರುದ್ಧ 4-0 ಗೋಲುಗಳಿಂದ; ಕನ್ನಂಡ ತಂಡವು 2-0ಯಿಂದ ಬೇರೇರ ತಂಡದ ವಿರುದ್ಧ; ಮಂಡಂಗಡ ತಂಡವು 1-0ಯಿಂದ ಕೊಲ್ಲೆರ ವಿರುದ್ಧ; ಮೂಕೊಂಡ ತಂಡವು 3-0 ಗೋಲುಗಳಿಂದ ಬೊಳಕರಂಡ ತಂಡದ ವಿರುದ್ಧ;  ಬೇಪಡಿಯಂಡ ತಂಡವು 4-0ಯಿಂದ ಅಜ್ಜಮಾಡ ವಿರುದ್ಧ ಜಯಿಸಿತು.

ಪ್ರತಿಕ್ರಿಯಿಸಿ (+)