ಗುರುವಾರ , ನವೆಂಬರ್ 21, 2019
26 °C

ಮಾದಂಡ ಹಾಕಿ: ಮಾಳೇಟಿರ, ಮಾದಂಡ ತಂಡಕ್ಕೆ ಜಯ

Published:
Updated:

ವಿರಾಜಪೇಟೆ: ಸಮೀಪದ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಮಾದಂಡ ಕಪ್‌ನಲ್ಲಿ ಬೆಳಿಗ್ಗೆ ನಡೆದ ಪಂದ್ಯಗಳಲ್ಲಿ ಮಾಳೇಟಿರ ಹಾಗೂ ಮಾದಂಡ ಕುಟುಂಬದ ತಂಡಗಳು ಜಯ ಸಾಧಿಸಿದವು.ಬೆಳಿಗ್ಗೆ 8 ಗಂಟೆಗೆ ಬೊಳ್ಳಚೆಟ್ಟಿರ ಮತ್ತು ಮಾಳೇಟಿರ (ಕೆದಮುಳ್ಳೂರು) ಕುಟುಂಬಗಳ ನಡುವೆ ನಡೆದ ಪಂದ್ಯದಲ್ಲಿ ಮಾಳೇಟಿರ ತಂಡವು 2-0 ಗೋಲುಗಳಿಂದ ಜಯ ಸಾಧಿಸಿತು. ಮಾಳೇಟಿರ ತಂಡದ ಪರವಾಗಿ ಧನು ಅಯ್ಯಪ್ಪ (39ನೇ ನಿ.) ಶರತ್ ಜೋಯಪ್ಪ (49ನೇ ನಿ.) ಗೋಲನ್ನು ಬಾರಿಸುವುದರ ಮುಖಾಂತರ ತಂಡಕ್ಕೆ ಜಯ ತಂದಿಟ್ಟರು.ಬೆಳಿಗ್ಗೆ 9 ಗಂಟೆಗೆ ನಡೆದ ಪಂದ್ಯದಲ್ಲಿ ಮಾದಂಡ ತಂಡವು ಬಡುಮಂಡ ತಂಡದ ವಿರುದ್ಧ 3-1 ಗೋಲುಗಳಿಂದ ಜಯ ಸಾಧಿಸಿತು. ಗೆದ್ದ ತಂಡದ ಪರವಾಗಿ ಮಿಲನ್ (46 ಮತ್ತು 49ನೇ ನಿ) 2 ಗೋಲು, ಅಯ್ಯಪ್ಪ (39ನೇ ನಿ.) 1 ಗೋಲು ಗಳಿಸಿದರು. ಬಡುಮಂಡ ತಂಡದ ಪರವಾಗಿ ಚೇತನ್(11ನೇ ನಿ.) 1 ಗೋಲನ್ನು ಬಾರಿಸಿದರು.ಇದೇ ಅವಧಿಯಲ್ಲಿ ನಡೆದ ಪಂದ್ಯದಲ್ಲಿ ಮುರುವಂಡ ತಂಡವು ಪಾಂಡಂಡ ತಂಡದ ವಿರುದ್ಧ 5-1 ಗೋಲುಗಳಿಂದ ಭರ್ಜರಿ ಜಯ ಸಾಧಿಸಿತು. ಮುರುವಂಡ ತಂಡದ ಪರವಾಗಿ ಅಣ್ಣಯ್ಯ (18ನೇ ನಿ), ಕಾರ್ಯಪ್ಪ (19ನೇ ನಿ.) ಅಣ್ಣಯ್ಯ (20 ಮತ್ತು 45ನೇ ನಿ.), ಸ್ವರೂಪ್ (30ನೇ ನಿ.) ಗೋಲು ಗಳಿಸಿದರೆ, ಪಾಂಡಂಡ ತಂಡದ ಪರವಾಗಿ ರೋಷನ್ ಮೇದಪ್ಪ (36ನೇ ನಿ.) ಗೋಲನ್ನು ಗಳಿಸಿದರು.ಬೆಳಿಗ್ಗೆ 10 ಗಂಟೆಗೆ ನಡೆದ ಪಂದ್ಯದಲ್ಲಿ ಕಾಟುಮಣಿಯಂಡ ತಂಡವು, ಬಡುವಂಡ ತಂಡದ ವಿರುದ್ಧ 1-0 ಗೋಲುಗಳಿಂದ ಜಯ ಸಾಧಿಸಿತು. ಕಾಟುಮಣಿಯಂಡ ತಂಡದ ಪರವಾಗಿ ತಿಮ್ಮಯ್ಯ (33ನೇ ನಿ) ಜಯದ ಗೋಲನ್ನು ಬಾರಿಸಿದರು.ಇನ್ನೊಂದು ಪಂದ್ಯದಲ್ಲಿ ನಳಿಯಂಡ ತಂಡವು ಸಣ್ಣುವಂಡ ತಂಡದ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ದಾಖಲಿಸಿತು. ನಳಿಯಂಡ ತಂಡದ ಪರವಾಗಿ ಬೋಪಣ್ಣ (14ನೇ ನಿ), ಕವನ್ (25 ಮತ್ತು 34ನೇ ನಿ.) ಗೋಲು ಪಡೆದರೆ, ಸಣ್ಣುವಂಡ ತಂಡದ ಪರವಾಗಿ ಗಗನ್(29ನೇ ನಿ) ಗೋಲನ್ನು ಬಾರಿಸಿದರು.ಕುತೂಹಲದ ಪಂದ್ಯ: ಬೆಳಿಗ್ಗೆ 11 ಗಂಟೆಗೆ ನಡೆದ ಪಂದ್ಯಾಟದಲ್ಲಿ ಕೋಳೇರ ತಂಡವು ನಂದಿನೆರವಂಡ ತಂಡದ ವಿರುದ್ಧ 6-5 ಗೋಲುಗಳ ಅಂತರದಿಂದ ಆಕರ್ಷಕ ಜಯ ಸಾಧಿಸಿತು. ಅತ್ಯಂತ ಕುತೂಹಲ ಮೂಡಿಸಿದ ಈ ಪಂದ್ಯವು 4-4 ಗೋಲುಗಳ ಸಮಾಂತರದಲ್ಲಿತ್ತು. ತದನಂತರದ ಟೈ-ಬ್ರೇಕ್‌ನಲ್ಲಿ 6-5 ಗೋಲುಗಳಿಂದ ಕೋಳೇರ ತಂಡವು ವಿಜಯ ಸಾಧಿಸಿತು. ಕೋಳೇರ ತಂಡದ ಪರವಾಗಿ ಗನು ಮುತ್ತಪ್ಪ (15ನೇ ನಿ), ಟೈ-ಬ್ರೇಕ್‌ನಲ್ಲಿ ದಿಲನ್, ರೋಷನ್, ಮಂಜು, ಅಯ್ಯಪ್ಪ, ವಿನಯ್ ತಲಾ ಒಂದು ಗೋಲನ್ನು ಬಾರಿಸಿದರು. ನಂದಿನೆರವಂಡ ತಂಡದ ಪರವಾಗಿ ಸೂರಜ್ (50ನೇ ನಿ.), ಹಾಗೂ ಟೈ-ಬ್ರೇಕ್‌ನಲ್ಲಿ ದಿನು, ಸೂರಜ್, ಸಜನ್, ಅನು ಅವರು ತಲಾ 1 ಗೋಲನ್ನು ಬಾರಿಸಿದರು.ಇದೇ ಅವಧಿಯಲ್ಲಿ ನಡೆದ ಇನ್ನೊಂದು ಒಂದ್ಯದಲ್ಲಿ ಮೂಕಳಮಾಡ ತಂಡವು ಮಾಚಿಮಂಡ ತಂಡದ ವಿರುದ್ಧ ಟೈ-ಬ್ರೇಕ್‌ನಲ್ಲಿ 8-7 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.ಮೈದಾನದಾಟದಲ್ಲಿ 2-2 ಸಮಾಂತರ ಕಾಯ್ದುಕೊಂಡಿದ್ದ ತಂಡಗಳು ತದನಂತರ ಟೈ-ಬ್ರೇಕ್‌ನಲ್ಲಿ ಸೆಣಸಬೇಕಾಯಿತು. ುಧ್ಯಾಹ್ನ 1 ಗಂಟೆಗೆ ನಡೆದ ಪಂದ್ಯದಲ್ಲಿ ಚೆರುಮಾಂಡಂಡ ತಂಡವು ಮಣವಟ್ಟಿರ ತಂಡದ ವಿರುದ್ಧ 3-0 ಗೋಲುಗಳಿಂದ ಜಯ ಸಾಧಿಸಿತು. ಚೆರುಮಾಂಡಂಡ ತಂಡದ ಪರವಾಗಿ ಪೂವಯ್ಯ (3 ಮತ್ತು 19ನೇ ನಿ), ಕಾರ್ತಿಕ್ (35ನೇ ನಿ) ತಲಾ 2 ಹಾಗೂ 1 ಗೋಲನ್ನು ಬಾರಿಸಿದರು.ಇದೇ ಅವಧಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಚೆರಿಯಪಂಡ ತಂಡವು ಕಾಳಿಮಾಡ ತಂಡದ ವಿರುದ್ಧ 5-2 ಗೋಲುಗಳಿಂದ ಜಯ ಸಾಧಿಸಿತು. ಚೆರಿಯಪಂಡ ತಂಡದ ಪರವಾಗಿ ಕಿಶು (10ನೇ ನಿ), ಸೌರಭ್ (24ನೇ ನಿ) ತದನಂತರದ ಟೈ-ಬ್ರೇಕ್‌ನಲ್ಲಿ ಹರೀಶ್, ಡ್ಯಾನಿ, ಮಿಥುನ್ ತಲಾ ಒಂದು ಗೋಲನ್ನು ಬಾರಿಸಿದರು. ಕಾಳಿಮಾಡ ತಂಡದ ಪರವಾಗಿ ಡ್ಯಾನಿ (9ನೇ ನಿ), ಕಿರಣ್ (30ನೇ ನಿ) ತಲಾ ಒಂದು ಗೋಲನ್ನು ಬಾರಿಸಿದರು.ಅಪರಾಹ್ನ 2 ಗಂಟೆಗೆ ನಡೆದ ಸೆನಸಾಟದಲ್ಲಿ ಕುಲ್ಲೇಟಿರ ತಂಡವು ಮಂಡೀರ (ಮಾದಾಪುರ) ತಂಡದ ಮೇಲೆ 4-0 ಗೋಲುಗಳ ಜಯ ಸಾಧಿಸಿತು. ಕುಲ್ಲೇಟಿರ ತಂಡದ ಪರವಾಗಿ ನಂದನ್ ನಾಚಪ್ಪ (5ನೇ ನಿ), ಮಂದಣ್ಣ (19ನೇ ನಿ), ಲೋಕೇಶ್ (27 ಹಾಗೂ 35ನೇ ನಿ) ತಲಾ 1- 1- 2ರಂತೆ ಗೋಲನ್ನು ಬಾರಿಸಿದರು.ನೀರಸವಾಗಿ ನಡೆದ ಪಂದ್ಯದಲ್ಲಿ ಬೋವೇರಿಯಂಡ ತಂಡವು ಕಾಯಪಂಡ ತಂಡದ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಬೋವೇರಿಯಂಡ ತಂಡದ ವರುಣ್ ಚಂಗಪ್ಪ 6ನೇ ನಿಮಿಷದಲ್ಲಿ ಒಂದು ಗೋಲನ್ನು ಬಾರಿಸಿದರು. ಈ ಆಟದಲ್ಲಿ ಒಂದೇ ಒಂದು ಗೋಲು ಬಂದಿತು.ಕುಶಾಲಪ್ಪ ಕೈಚಳಕ

ಅಪರಾಹ್ನ 3 ಗಂಟೆಗೆ ನಡೆದ ಪಂದ್ಯದಲ್ಲಿ ಆದೆಂಗಡ ತಂಡವು ಮಂದಪಂಡ ತಂಡದ ವಿರುದ್ಧ ನಿರಾಯಾಸವಾಗಿ ಜಯ ಸಾಧಿಸಿತು. 5-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು.ಆದೆಂಗಡ ತಂಡದ ಪರವಾಗಿ ಆಕರ್ಷಕ ಆಟವಾಡಿದ ಕುಶಾಲಪ್ಪ 4 (11, 13, 18, 47ನೇ ನಿ) ಗೋಲುಗಳನ್ನು ಬಾರಿಸಿ ಮಿಂಚಿದರು. ಸೋಮಣ್ಣ (15ನೇ ನಿ.) ಗೋಲನ್ನು ಬಾರಿಸಿದರು.ಮಂದಪಂಡ ತಂಡದ ಪರವಾಗಿ ಪೊನ್ನಣ್ಣ (30ನೇ ನಿ) 1 ಗೋಲನ್ನು ಬಾರಿಸಿದರು. ಇದೇ ಅವಧಿಯಲ್ಲಿ ನಡೆದ ಪಂದ್ಯಾಟದಲ್ಲಿ ಅರೆಯಡ ತಂಡವು ಕೊದೆಂಗಡ ತಂಡದ ಮೇಲೆ 4-0 ಗೋಲುಗಳ ಅಂತರದಲ್ಲಿ ಸುಲಭವಾಗಿ ಜಯ ಸಾಧಿಸಿತು. ಅರೆಯಡ ತಂಡದ ಪರವಾಗಿ ಚಿಣ್ಣಪ್ಪ (3ನೇ ನಿ), ಪೆಮ್ಮಯ್ಯ (11 ಹಾಗೂ 13ನೇ ನಿ), ಸೋಮಣ್ಣ (24ನೇ ನಿ) ಗೋಲನ್ನು ಬಾರಿಸಿದರು.

ಪ್ರತಿಕ್ರಿಯಿಸಿ (+)