ಶನಿವಾರ, ಮೇ 21, 2022
25 °C

ಮಾದಕ ವಸ್ತು ಮಾರಾಟ ನಿಷೇಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ಇಂದಿನ ಕೆಲವು ವಿದ್ಯಾರ್ಥಿಗಳು ಸ್ನೇಹಿತರ ಪ್ರಚೋದನೆಯಿಂದ  ಮಾದಕ ವಸ್ತುಗಳ ದಾಸನಾಗಿ ಉಜ್ವಲವಾಗಿ ರೂಪಿಸಿಕೊಳ್ಳಬೇಕಾಗಿದ್ದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಮತಿಘಟ್ಟ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಕಿರಣ್‌ಕುಮಾರ್ ವಿಷಾದ ವ್ಯಕ್ತಪಡಿಸಿದರು.  ಪಟ್ಟಣದ ಬಿಜಿಎಸ್ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಮಾದಕ ವಸ್ತು ಸೇವನೆ ಹಾಗು ಕಾನೂನು ಬಾಹಿರ ಚಟುವಟಿಕೆ ವಿರುದ್ಧ ವಿಶ್ವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.ಪೋಷಕರು, ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳು ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ವಿರೋಧಿ ಸದಿದ್ದರೆ ಮುಂದಿನ ಯುವಪೀಳಿಗೆಯ ಏಳ್ಗೆ ಕಾಣಲು ಸಾಧ್ಯವಿಲ್ಲ ಎಂದರು.ಕಾಲೇಜು ಪ್ರಾಚಾರ್ಯ ಜಗದೀಶ್ ಮಾತನಾಡಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಾದಕ ವಸ್ತುಗಳಿಗೆ ಯುವಕರೇ ಹೆಚ್ಚಾಗಿ ಬಲಿಯಾಗುವು ದ ರಿಂದ ದೇಶದ ಅಭಿವೃದ್ಧಿ ಮೇಲೆ ಪರಿಣಾಮ ಬೀರ ಲಿದೆ. ಕ್ಷಣದ ಸಂತೋಷಕ್ಕೆ ಜೀವನವೇ ಬಲಿ ಕೊಡ ಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೀಳಿದರು.ಕಡೂರು ಬಿಜಿಎಸ್ ಸಂಸ್ಥೆಯ ಕಾರ್ಯನಿರ್ವಹಣಾ ಧಿಕಾರಿ ಸುಮಿತ್ರಾ ಮಾತನಾಡಿ, ಸರ್ಕಾರಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಬೇಕು. ಶಾಲಾ ಕಾಲೇಜುಗಳ ಶಿಕ್ಷಕ ಮತ್ತು ಉಪನ್ಯಾಸಕರು ಮಾದಕ ವಸ್ತುಗಳ ಸೇವನೆ ಹಾಗು ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಮಕ್ಕಳಿಗೆ ತಿಳಿಸಿಕೊಡುವುದರ ಮೂಲಕ ಅವರಲ್ಲಿ ಜಾಗೃತಿ ಮೂಡಿಸಿ ಸಂಸ್ಕಾರಯುತ ಕುಟುಂಬದ ರೂವಾರಿ ಗಳನ್ನು ನಿರ್ಮಾಣ ಮಾಡುವುದಲ್ಲಿ  ಜವಾಬ್ದಾರಿಯುತ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು. ಉಪನ್ಯಾಸಕರಾದ ಉಮೇಶ್, ಜಗದೀಶ್, ಎಸ್.ಎಸ್.ಉಮೇಶ್, ದೀಪ, ಶುಭರಾಣಿ ಮತ್ತು ಶ್ರೀನಿಧಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.