ಮಾದನಭಾವಿ ಕೆರೆ ಅಭಿವೃದ್ಧಿಗೆ ಚಾಲನೆ

ಸೋಮವಾರ, ಜೂಲೈ 22, 2019
24 °C

ಮಾದನಭಾವಿ ಕೆರೆ ಅಭಿವೃದ್ಧಿಗೆ ಚಾಲನೆ

Published:
Updated:

ಧಾರವಾಡ: “ಕೆರೆಗಳ ಅಭಿವೃದ್ಧಿಗಾಗಿ ಧಾರವಾಡ ವಿಧಾನಸಭಾ ಮತಕ್ಷೇತ್ರಕ್ಕೆ 4.20 ಕೋಟಿ ರೂಪಾಯಿ ಅನುದಾನ ಉಪಯೋಗಿಸಲಾಗುತ್ತಿದೆ” ಎಂದು ಶಾಸಕಿ ಸೀಮಾ ಮಸೂತಿ ತಿಳಿಸಿದರು.ತಾಲ್ಲೂಕಿನ ಮಾದನಭಾವಿಯಲ್ಲಿ 28 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಹಲವಾರು ಗ್ರಾಮಗಳು ಕೆರೆಯಾಧಾರಿತ ನೀರನ್ನು ಅವಲಂಬಿಸಿವೆ. ಅನೇಕ ಕಡೆ ಕೆರೆ ನೀರನ್ನು ದನಕರು ಗಳಿಗೆ, ಮೇಕೆಗಳಿಗೆ ಕುಡಿಯಲು ಬಳಸುತ್ತಿದ್ದು, ಅವು ಗಳ ಶುದ್ಧೀಕರಣ ಅಗತ್ಯ ಎಂದು ಅವರು ಹೇಳಿದರು.ತಮ್ಮ ಕ್ಷೇತ್ರದಲ್ಲಿ 18 ಕೆರೆಗಳಿಗೆ ಮರುಜೀವ ನೀಡಲಾಗುವುದು ಎಂದು ಶಾಸಕರು ತಿಳಿಸಿದರು. ಅಶೋಕ ಮಸೂತಿ, ಮಡಿವಾಳಪ್ಪ ಉಳವಣ್ಣವರ, ಬಸವರಾಜ ಬ್ಯಾಳಿ, ಬಸವರಾಜ ದೊಡವಾಡ, ಶಿವಾನಂದ ಹೊಳೆಹಡಗಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry