ಭಾನುವಾರ, ನವೆಂಬರ್ 17, 2019
29 °C

ಮಾದರಿ ಪಟ್ಟಣ ಮಾಡುವುದೇ ನನ್ನ ಗುರಿ

Published:
Updated:

ಹುಮನಾಬಾದ್: ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೂಲಕ ಹುಮನಾಬಾದ್‌ಅನ್ನು ಮಾದರಿ ಪಟ್ಟಣವಾಗಿ ಪರಿವರ್ತಿಸುವುದೇ ತಮ್ಮ ಗುರಿ ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದರು. ಕಳೆದ ತಿಂಗಳು ನೀಡಿದ್ದ ಭರವಸೆ ಮೇರೆಗೆ ಬುಧವಾರ ಇಲ್ಲಿನ ವಿವಿಧ ವಾರ್ಡ್‌ಗಳಿಗೆ ಕಾಲ್ನಡಿಗೆ ಮೂಲಕ ತೆರಳಿ ಸಮಸ್ಯೆ ಆಲಿಸಿದರು.ಎಸ್.ಎಫ್.ಸಿ, 13ನೇ ಹಣಕಾಸು ಯೋಜನೆ ಮತ್ತು 22.75 ಯೋಜನೆಯ ಅಡಿಯಲ್ಲಿ ಬಿಡುಗೆಯಾದ ವಿಶೇಷ ಅನುದಾನದಲ್ಲಿ ನಗರದ ಎಲ್ಲ ವಾರ್ಡ್‌ಗಳಲ್ಲೂ ತಮ್ಮ ನೇತೃತ್ವದಲ್ಲಿ ಪುರಸಭೆಯ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಜೊತೆಗೆ ತೆರಳಿ ಸಮಸ್ಯೆ ಆಲಿಸಿ, ಬಗೆಹರಿಸುವ ಸಂಬಂಧ ಮಂಗಳವಾರದ ಸಭೆಯಲ್ಲಿ ನಿರ್ಣಯಿಸಲಾಗಿತ್ತು.ನಿರ್ಣಯದಂತೆ ಬುಧವಾರ ಮಧ್ಯಾಹ್ನ 2ಕ್ಕೆ ಗ್ರಾಮ ದೇವತೆ ವೀರಭದ್ರೇಶ್ವರ ದರ್ಶನಪಡೆದು ಸರದಿಯಂತೆ ವಾರ್ಡ್-1ರಿಂದ ಆರಂಭಗೊಂಡು 10ನೆಯ ವಾರ್ಡ್‌ಗಲ್ಲಿ ಕಾಲ್ನಡಿಗೆ ಮೂಲಕ ತೆರಳಿ, ಸಾರ್ವಜನಿಕರಿಂದ ಸಮಸ್ಯೆ ಆಲಿಸಿ, ಇತ್ಯರ್ಥಪಡಿಸುವ ಕುರಿತು ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಆದ್ಯತೆಯ ಮೇರೆಗೆ ಚರಂಡಿ, ಸಿಸಿ ರಸ್ತೆ ನಿರ್ಮಿಸಲು ಸೂಚಿಸಿದರು.ಹುಮನಾಬಾದ್ ಇತಿಹಾಸದಲ್ಲಿ ಶಾಸಕರೊಬ್ಬರು ತಮ್ಮಂತೆ ವಾರ್ಡ್‌ವಾರು ಕಾಲ್ನಡಿಗೆಯ ಮೂಲಕ ಅಧ್ಯಕ್ಷ ಹಾಗೂ ಸರ್ವ ಸದಸ್ಯರೊಂದಿಗೆ ತೆರಳಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಇತ್ಯರ್ಥ ಪಡಿಸಿದ ನಿದರ್ಶನಗಳು ಇರಲಿಲ್ಲ. ಈ ಮೂಲಕ ತಾವು ಹೊಸ ಇತಿಹಾಸ ನಿರ್ಮಿಸಲು ಮಾಡಿದ ಸಣ್ಣ ಪ್ರಯತ್ನ ಎಂದು ಸ್ದ್ದುದಿಗಾರರಿಗೆ ತಿಳಿಸಿದರು.ಅಧ್ಯಕ್ಷೆ ಪದ್ಮಾವತಿ ಮಚಕೂರಿ, ಉಪಾಧ್ಯಕ್ಷ ಎಸ್.ಎ.ಬಾಸೀತ್ ಓಮರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಗೋರೆಮಿಯ್ಯ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅವಿನಶ ಎಖ್ಖೇಳ್ಳಿಕರ್, ಜೆಸ್ಕಾಂ ಎಇಇ ಮಾಣಿಕರಾವ ಪವಾರ, ಪುರಸಭೆಯ ಮುಖ್ಯಾಧಿಕಾರಿ ಸತೀಶ ಗುಡ್ಡೆ, ಇಂಜಿನಿಯರಗಳಾದ ಅಣ್ಯಪ್ಪ, ವೀರಶೆಟ್ಟಿ ರಕ್ಷೆ, ಅಶೋಕ ಅಲ್ಲದೇ ನಗರದ ಎಲ್ಲ ವಾರ್ಡ್‌ಗಳ ಸದಸ್ಯರು ಈ ಸಂದರ್ಭದಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)