ಶನಿವಾರ, ಏಪ್ರಿಲ್ 17, 2021
28 °C

ಮಾದರಿ ಸಂಗ್ರಹಿಸಿ ಪರೀಕ್ಷಿಸಿದ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾದರಿ ಸಂಗ್ರಹಿಸಿ ಪರೀಕ್ಷಿಸಿದ ತಂಡ

ಹೊಸಪೇಟೆ: ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿರುವ ಹಿನ್ನೆಲೆಯಲ್ಲಿ  ರಾಜ್ಯ ಪರಿಸರ ಹಾಗೂ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ತಂಡ ಜಲಾಶಯಕ್ಕೆ ಭೇಟಿ ನೀಡಿ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದೆ.ಗುರುವಾರ ಸಂಜೆ ಭೇಟಿ ನೀಡಿದ ತಂಡ ಜಲಾಶಯದ ಬೇರೆ ಬೇರೆ ಸ್ಥಳಗಳಲ್ಲಿ ನೀರಿನ ಮಾದರಿಯನ್ನು ಸಂಗ್ರಹಿಸಿ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿರುವುದಾಗಿ ಹೊಸಪೇಟೆ ನಗರಸಭೆಯ ಪೌರಾಯುಕ್ತ ಕೆ.ರಂಗಸ್ವಾಮಿ ತಿಳಿಸಿದ್ದಾರೆ.  ಕಳೆದ ಮೂರು ವರ್ಷಗಳಿಂದ ಈ ರೀತಿಯಲ್ಲಿ ಜಲಾಶಯದ ನೀರು ಹಸಿರಾಗುತ್ತಿದ್ದು ಈ ವರ್ಷವೂ ಹಸಿರಾಗಿದೆ.ಆದರೆ ಗುರುವಾರ ಸಂಜೆ ಮತ್ತು ಶುಕ್ರವಾರಗಳಂದು ನೀರಿನಲ್ಲಿ ಎಣ್ಣೆ ಅಂಶ ತೇಲುತ್ತಿರುವುದು ಕಾಣಿಸುವ ಮೂಲಕ ಮತ್ತಷ್ಟು ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಜಲಾಶಯದ ದಂಡೆಯುದ್ದಕ್ಕೂ ಇಂತಹ ಅಂಶ ಕಾಣಿಸಿಕೊಳ್ಳುವ ಮೂಲಕ ಈ ಬಾರಿ ಹೆಚ್ಚಿನ ಪರಿಣಾಮವಾಗಬಹುದು ಎನ್ನಲಾಗಿದೆ.ಈ ಹಿಂದಿನ ಎಲ್ಲಾ ವರದಿಗಳಲ್ಲಿ ಮೇಲ್ಭಾಗದಲ್ಲಿ ಕಾರ್ಖಾನೆಗಳ ಘನ ತ್ಯಾಜ್ಯ ಜಲಾಶಯ ಸೇರುತ್ತಿರುವುದು ಆತಂಕಕಾರಿ ನೀರನ್ನು ಕಾಯಿಸಿ ಶೋಧಿಸಿ ಕುಡಿಯಬೇಕು ಎಂದು ನೀರು ಪರೀಕ್ಷೆ ನಡೆಸಿದ ಪ್ರಯೋಗಾಲಯ ವರದಿ ನೀಡಿವೆ. ಈ ಬಾರಿ ಯಾವ ರೀತಿ ವರದಿ ಬರಲಿದೆ ಎಂಬುದು ಕುತೂಹಲವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.