ಮಾದೇಗೌಡರಿಗೆ ದೇವೇಗೌಡ ಮನವಿ

7

ಮಾದೇಗೌಡರಿಗೆ ದೇವೇಗೌಡ ಮನವಿ

Published:
Updated:

ನವದೆಹಲಿ: ಗುರುವಾರದಿಂದ ಉಪವಾಸ ನಡೆಸಲಿರುವ ಮಂಡ್ಯ ಜಿಲ್ಲೆಯ ಹಿರಿಯ ಮುಖಂಡ ಜಿ. ಮಾದೇಗೌಡರಿಗೆ ಈ ನಿರ್ಧಾರ ಕೈಬಿಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮನವಿ ಮಾಡಿದ್ದಾರೆ.`ಮಾದೇಗೌಡರು ವಯಸ್ಸಿನಲ್ಲಿ ನನಗಿಂತ ಹಿರಿಯರು. ಇಳಿ ವಯಸ್ಸಿನಲ್ಲಿ ಉಪವಾಸ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ತೀರ್ಮಾನದಿಂದ ಹಿಂದೆ ಸರಿಯುವಂತೆ ಅವರಿಗೆ ಮನವಿ ಮಾಡುತ್ತೇನೆ~ ಎಂದು ದೇವೇಗೌಡರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.`ಕಾವೇರಿ ನದಿ ಪಾತ್ರದ ರೈತರು ಉದ್ವೇಗಕ್ಕೆ ಒಳಗಾಗದೆ ತಾಳ್ಮೆ ವಹಿಸಬೇಕು. ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಿರುವುದು ಆತಂಕಕ್ಕೆ ಕಾರಣವಾಗಿದೆ. ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ~ ಎಂದು ಜೆಡಿಎಸ್ ವರಿಷ್ಠರೂ ಆದ ದೇವೇಗೌಡರು ನುಡಿದರು.ಹಿರಿಯ ವಕೀಲ ಎಫ್.ಎಸ್. ನಾರಿಮನ್ ಸೇರಿದಂತೆ ಕಾವೇರಿ ವಿವಾದದಲ್ಲಿ ರಾಜ್ಯದ ಪರ ಹಾಜರಾಗುತ್ತಿರುವ ವಕೀಲರ ತಂಡವನ್ನು ಭೇಟಿ ಮಾಡಿ ಚರ್ಚಿಸಿರುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry