ಶನಿವಾರ, ಜೂನ್ 12, 2021
24 °C

ಮಾಧುರಿ ಅಭಿನಯ ಮೆಚ್ಚಿಕೊಂಡ ಸಂಪತ್‌ ಪಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗುಲಾಬ್‌ ಗ್ಯಾಂಗ್‌  ಸಿನಿಮಾ ನಿರ್ಮಾಪಕರ ಮೇಲೆ ಸಿಟ್ಟಾಗಿ ಕೋರ್ಟ್‌ ಮೆಟ್ಟಿಲೇರಿದ್ದ ಗುಲಾಬಿ ಗ್ಯಾಂಗ್ ಸ್ಥಾಪಕಿ ಸಂಪತ್‌ ಪಾಲ್‌, ಗುಲಾಬ್‌ ಗ್ಯಾಂಗ್‌ ಸಿನಿಮಾ­ದಲ್ಲಿ ಮಾಧುರಿ ದೀಕ್ಷಿತ್‌ ಅವರ ಅಭಿನಯ ನೋಡಿ ‘ನನ್ನನ್ನೇ ತೆರೆ ಮೇಲೆ ನೋಡಿದ ಅನುಭವವಾಯಿತು’ ಎಂದು ಪ್ರತಿಕ್ರಿಯಿಸಿದ್ದಾರೆ.‘ಚಿತ್ರ ನಿರ್ಮಾಪಕರೊಂದಿಗೆ ನನ್ನ ಸಂಘರ್ಷ ಮುಗಿದಿಲ್ಲ. ನನ್ನ ಬೇಡಿಕೆ ಈಡೇರುವವರೆಗೆ ಅದು ಮುಂದುವರಿ­ಯುತ್ತದೆ. ಆದರೆ ಸಿನಿಮಾದಲ್ಲಿ ಮಾಧುರಿ ಅವರ ಅಭಿನಯ ಕೌಶಲ ನನ್ನನ್ನು ಬಹುವಾಗಿ ಆಕರ್ಷಿಸಿದೆ’ ಎಂದು ಗುಲಾಬಿ ಗ್ಯಾಂಗ್‌ ಸ್ಥಾಪಕಿ ಸಂಪತ್‌ ಪಾಲ್‌ ಹೇಳಿದ್ದಾರೆ.‘ಮಾಧುರಿ ಅವರ ಪಾತ್ರ ನನ್ನ ಜೀವನದ ಪ್ರತಿಫಲನದಂತಿದೆ. ಅವರ ಅಭಿನಯಕ್ಕೆ ಮನಸೋತಿದ್ದೇನೆ. ಸಿನಿಮಾ ನಟರ ಮೇಲೆ ನನ್ನ ಆಕ್ಷೇಪ ಇಲ್ಲ. ಸಂಘರ್ಷ ಇರುವುದು ನಿರ್ಮಾಪಕರಾದ ಅನುಭವ್‌ ಸಿನ್ಹಾ ಅವರೊಂದಿಗೆ ಎಂದು ಶುಕ್ರವಾರ ವಕೀಲರೊಂದಿಗೆ ಸಿನಿಮಾ ನೋಡಿದ ನಂತರ ಸಂಪತ್‌ ಪಾಲ್‌ ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.