ಮಾಧುರಿ ದೀಕ್ಷಿತ್ ಗೆ ಪಿತೃ ವಿಯೋಗ

7

ಮಾಧುರಿ ದೀಕ್ಷಿತ್ ಗೆ ಪಿತೃ ವಿಯೋಗ

Published:
Updated:

ಮುಂಬೈ (ಪಿಟಿಐ): ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ತಂದೆ ಶಂಕರ ಆರ್ ದೀಕ್ಷಿತ್ ಅವರು ದೀರ್ಘಕಾಲದ ಅಸ್ವಾಸ್ಥ್ಯದ ಬಳಿಕ ಶುಕ್ರವಾರ ಬೆಳಗ್ಗೆ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಶಂಕರ ದೀಕ್ಷಿತ್ ಅವರು ಕೊನೆಯುಸಿರೆಳೆದಾಗ ಅವರ ಕುಟುಂಬದ ಸದಸ್ಯರೆಲ್ಲರೂ ಅವರ ಪಕ್ಕದಲ್ಲಿ ಇದ್ದರು.'ನಾವು ಅವರನ್ನು ಕಳೆದುಕೊಂಡಿದ್ದೇವೆ. ಆದರೆ ಅವರ ಪೂರ್ಣ ಪ್ರಮಾಣದ ಬದುಕು ನಡೆಸಿದ್ದರು ಎಂಬುದರ ಅರಿವು ನಮಗಿದೆ. ಶೋಕ ಸಂದೇಶ ಹಾಗೂ ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ನಾವು ಧನ್ಯವಾದ ಅರ್ಪಿಸುತ್ತೇವೆ' ಎಂದು ಮಾಧುರಿ ದೀಕ್ಷಿತ್ ಹೇಳಿಕೆಯಲ್ಲಿ ತಿಳಿಸಿದರು.'ಝಲಕ್ ದಿಖ್ಲಾ ಜಾ' ನೃತ್ಯ ರಿಯಾಲಿಟಿ ಶೋ ತೀರ್ಪುಗಾರರ ಕಾರ್ಯವನ್ನು ಮಾಧುರಿ ದೀಕ್ಷಿತ್ ಅವರು ಪ್ರಸ್ತುತ ನಿಭಾಯಿಸುತ್ತಿದ್ದಾರೆ. ಈ ವಾರಾಂತ್ಯದಲ್ಲಿ ರಿಯಾಲಿಟಿ ಶೋ ಅಂತಿಮಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry