ಭಾನುವಾರ, ಮೇ 9, 2021
26 °C

ಮಾಧ್ಯಮಗಳಿಗೆ ಮಾರ್ಗದರ್ಶಿ ಸೂತ್ರ: ಸುಪ್ರೀಂ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನ್ಯಾಯಾಲಯ ಕಲಾಪಗಳನ್ನು ವರದಿ ಮಾಡುವ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ರಚಿಸಲು ಅನುಕೂಲವಾಗಲು ಸಲಹೆಗಳನ್ನು ನೀಡುವಂತೆ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಶನಿವಾರ ಸಲಹೆ ಮಾಡಿದೆ.ಮಾಧ್ಯಮಗಳು ಉತ್ಪ್ರೇಕ್ಷಿತವಾಗಿ ವರದಿ ಮಾಡುವುದನ್ನು ನಿರ್ಬಂಧಿಸುವಂತೆ ಕೋರಿ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿರುವವರು ಈ ಸಲಹೆಗಳನ್ನು ನೀಡಬೇಕು. ಆದರೆ ಪ್ರಕರಣಗಳ ಗುಣದೋಷಗಳ ಆಧಾರದ ಮೇಲೆ ತೀರ್ಪು ನೀಡಬಾರದು ಎಂದು ಹೇಳಿದೆ.ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ವರದಿ ಮಾಡುವ ಸಂದರ್ಭದಲ್ಲಿ ಅನುಸರಿಬೇಕಾದ ನಿಯಮಗಳನ್ನು ಕುರಿತು ಮಾರ್ಗದರ್ಶಿ ಸೂತ್ರಗಳನ್ನು ರಚಿಸುವ  ಉದ್ದೇಶವನ್ನು ಮಾತ್ರ ಕೋರ್ಟ್ ಹೊಂದಿದ್ದು, ಇತರೆ ವರದಿಗಳ ಬಗ್ಗೆ ಯಾವುದೇ ನಿರ್ಬಂಧ ವಿಧಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್. ಎಚ್. ಕಪಾಡಿಯಾ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.