ಸೋಮವಾರ, ಜೂನ್ 14, 2021
24 °C

ಮಾಧ್ಯಮದಲ್ಲಿ ಮಹಿಳೆ- ವಿಚಾರ ಗೋಷ್ಠಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ವಿದ್ಯಾಭವನದ ಮಾಧ್ಯಮ ಭಾರತಿ, ಕರ್ನಾಟಕ ಲೇಖಕಿಯರ ಸಂಘ ಮತ್ತು ಬೆಂಗಳೂರಿನ ರಂಗಸಂಸ್ಥೆಯಾಗಿರುವ ಕಲಾಗಂಗೋತ್ರಿ ಮಹಿಳಾ ದಿನಾಚರಣೆಗೆ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿವೆ.

ಭಾರತೀಯ ವಿದ್ಯಾಭವನದ ಇ.ಎಸ್.ವಿ. ಸಭಾಂಗಣದಲ್ಲಿ ಗುರುವಾರ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ವಿಚಾರ ಗೋಷ್ಠಿ, ಗೀತಗಾಯನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.  ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿಯವರು ಅಧ್ಯಕ್ಷತೆ ವಹಿಸಲಿದ್ದಾರೆ.

`ಮಾಧ್ಯಮದಲ್ಲಿ ಮಹಿಳೆಯರ ಬಿಂಬ ಮತ್ತು ಕಾರ್ಯ~ ಕುರಿತು ಪ್ರಜಾವಾಣಿಯ ಸಹಾಯಕ ಸಂಪಾದಕಿ ಸಿ.ಜಿ.ಮಂಜುಳ, ಜನಶ್ರೀ ಸುದ್ದಿವಾಹಿನಿಯ ಫೀಚರ್ಸ್ ಸಂಪಾದಕಿ ಕೆ.ಎಚ್.ಸಾವಿತ್ರಿ, ಆಕಾಶವಾಣಿ ವಿಜ್ಞಾನ ವಿಭಾಗದ ಪ್ರಸಾರ ನಿರ್ವಾಹಕಿ ಸುಮಂಗಲಾ ಮಮ್ಮಿಗಟ್ಟಿ, ಸುವರ್ಣ ಸುದ್ದಿವಾಹಿನಿಯ ವರದಿಗಾರ್ತಿ ವಿಜಯಲಕ್ಷ್ಮೀ ಶಿಬರೂರು ಮತ್ತು ಜರ್ಮನಿಯ ಮ್ಯೋಕ್ಸ್ ಫ್ಲಾಂಕ್ ಸಂಸ್ಥೆಯ ಸಂಶೋಧಕಿ ಡಾ.ಸಹನಾ ಉಡುಪ ಸಂವಾದ ನಡೆಸುವರು.

ನ್ಯಾಯವಾದಿ ಪ್ರಭಾಮೂರ್ತಿ ಅವರ  `ನಿತ್ಯ ಜೀವನದಲ್ಲಿ ಕಾನೂನು ಪರಿಹಾರ~ ಮತ್ತು `ಕೈಲಾಸಗಿರಿ ದರ್ಶನ~  ಪುಸ್ತಕಗಳನ್ನು ಮಾಧ್ಯಮ ಭಾರತಿ ನಿರ್ದೇಶಕ ಎಂ.ಜಯರಾಮ ಅಡಿಗ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಡಾ.ವೈ.ಎಸ್.ಜ್ಯೋತಿ ಶಶಿಕುಮಾರ್, ಟಿ.ಆರ್. ಪ್ರಸನ್ನಲಕ್ಷ್ಮಿ, ಎಸ್.ಆರ್. ದೀಪಾ ಶ್ರೀನಿವಾಸ್ ಮತ್ತು ಸಿಂಚನ ದೀಕ್ಷಿತ್ ಅವರಿಂದ  ಕನ್ನಡ ಗೀತೆಗಳ ಗಾಯನ.

ಆನಂತರ ಕನ್ನಡತಿಯರ ಇತ್ತೀಚಿನ ಪ್ರಮುಖ ಆತ್ಮ ಕಥಾನಕಗಳು ಕುರಿತು ಪ್ರಮುಖ ವಿಮರ್ಶಕರಾದ ಡಾ.ಎಂ.ಎಸ್.ಆಶಾದೇವಿ ಮತ್ತು ಕೆ.ಎಂ.ವಿಜಯಲಕ್ಷ್ಮೀ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಮತ್ತು ಉಮಾಶ್ರೀ ಅವರ ಉಪಸ್ಥಿತಿಯಲ್ಲಿ ಲೇಖಕಿಯರಾದ ಗೀತಾ ಶೆಣೈ ಮತ್ತು ಇಂದಿರಾ ಹೆಗ್ಗಡೆ ಅವರಿಂದ ಸಂವಾದ.

ಸಮಾರೋಪದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಮತ್ತು ಮೈಸೂರು ರಂಗಾಯಣದ ನಿರ್ದೇಶಕ ಡಾ.ಬಿ.ವಿ.ರಾಜಾರಾಮ್ ಭಾಗವಹಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.