ಮಾಧ್ಯಮ ಕ್ಷೇತ್ರ ಹೆಚ್ಚು ಕ್ರಿಯಾಶೀಲ: ಸಚಿವ

7

ಮಾಧ್ಯಮ ಕ್ಷೇತ್ರ ಹೆಚ್ಚು ಕ್ರಿಯಾಶೀಲ: ಸಚಿವ

Published:
Updated:

ಬೆಂಗಳೂರು: `ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮಾಧ್ಯಮ ಕ್ಷೇತ್ರ ಹೆಚ್ಚು ಕ್ರಿಯಾಶೀಲವಾಗಿದೆ' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ರೋಟರಿ ಸಂಸ್ಥೆ ಹಾಗೂ ಬೆಂಗಳೂರು ಮೀಡಿಯಾ ಫೌಂಡೇಷನ್‌ನಗರದಲ್ಲಿ ಬುಧವಾರ ಜಂಟಿಯಾಗಿ ಆಯೋಜಿಸಿದ್ದ ಮೊದಲನೇ `ರೋಟರಿ - ಬಿಎಂಎಫ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.`ಜನರಿಗೆ ಮಾಹಿತಿ ನೀಡುವ ಜತೆಗೆ ಸರ್ಕಾರವನ್ನು ಎಚ್ಚರಿಸುವ ಹಾಗೂ ಜನಾಭಿಪ್ರಾಯ ರೂಪಿಸುವ ಕಾರ್ಯವನ್ನು ಮಾಧ್ಯಮ ಮಾಡುತ್ತಿದೆ. ಕೆಲವರು ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಇತರರ ಸ್ವಾರ್ಥಕ್ಕೆ ಮಾಧ್ಯಮ ಬಲಿಯಾಗದಂತೆ ಕೆಲಸ ಮಾಡಬೇಕಾದ ಸವಾಲು ಪತ್ರಕರ್ತರ ಮುಂದಿದೆ' ಎಂದರು.ಕಾರ್ಯಕ್ರಮದಲ್ಲಿ `ಪ್ರಜಾವಾಣಿ' ಹಿರಿಯ ಉಪ ಸಂಪಾದಕಿ ಸುಚೇತನಾ ನಾಯ್ಕ ಹಾಗೂ ಕ್ರೀಡಾ ವರದಿಗಾರ ಕೆ. ಓಂಕಾರ ಮೂರ್ತಿ ಸೇರಿದಂತೆ ಪತ್ರಕರ್ತರಾದ ಸುದಿಪ್ತೊ ಮಂಡಲ್, ಬಿ.ಎ. ಅರುಣ್, ಬನ್ಸಿ ಕಾಳಪ್ಪ, ಆಯೇಷಾ ಖಾನುಂ, ಜಯಪ್ರಕಾಶ್ ಶೆಟ್ಟಿ, ಮುತ್ತುಮಣಿ ನನ್ನನ್, ಮೊಹಮ್ಮದ್ ಸಿದ್ಧಿಕ್ ಅಲ್ದೂರಿ, ಕೆ.ಎಸ್. ಶ್ರೀಧರ್, ಟಿ.ಅಬ್ದುಲ್ ಹಫೀಜ್, ಫಕೀರ್ ಬಾಲಾಜಿ, ಸುರೇಂದ್ರ ಸಿಂಗ್ ಪುರೋಹಿತ್ ಮತ್ತು ಆದಿನಾರಾಯಣ ಅವರಿಗೆ  ಪ್ರಶಸ್ತಿ ಪ್ರದಾನ ಮಾಡಲಾಯಿತು.ರೋಟರಿ ಬೆಂಗಳೂರು ಕೇಂದ್ರ ವಿಭಾಗದ ಅಧ್ಯಕ್ಷ ಎಂ.ವಿ. ನಾಗೇಶ್ವರ್, ಬೆಂಗಳೂರು ಮೀಡಿಯಾ ಫೌಂಡೇಷನ್ ಸಂಸ್ಥಾಪಕ ವಿಜಯ್ ಗ್ರೋವರ್, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಸುಭಾಷ್ ಅಗರ್‌ವಾಲ್ ಪ್ರೆಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ಉಪಾಧ್ಯ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry