ಮಾಧ್ಯಮ ದೊರೆ ರುನ್‌ ರುನ್‌ ಷಾ ನಿಧನ

7

ಮಾಧ್ಯಮ ದೊರೆ ರುನ್‌ ರುನ್‌ ಷಾ ನಿಧನ

Published:
Updated:

ಹಾಂಕಾಂಗ್‌ (ಐಎಎನ್‌ಎಸ್‌): ಹಾಂಕಾಂಗ್‌ನ ಮಾಧ್ಯಮ ದೊರೆ ಹಾಗೂ ಮಾನವತಾವಾದಿ ರುನ್‌ ರುನ್ ಷಾ (107)  ಮಂಗಳವಾರ ನಸುಕಿನಲ್ಲಿ ನಿಧನ ಹೊಂದಿದ್ದಾರೆ.ಅವರು 1958ರಲ್ಲಿ ಷಾ ಬ್ರದರ್ಸ್‌ ಎಂಬ ಚಿತ್ರ ನಿರ್ಮಾಣ ಸ್ಟುಡಿಯೊ ಆರಂಭಿಸಿ ಚೀನೀ ಭಾಷೆಯಲ್ಲಿ ಸಾವಿರಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

‘ದಿ ಮ್ಯಾಗ್ನಿಫಿಸಂಟ್‌ ಕಾನ್‌ಕ್ಯುಬೈನ್‌’ ಮತ್ತು ‘ಒನ್‌ ಆರ್ಮ್‌ಡ್‌ ಸ್ವೋರ್ಡ್ಸ್‌ ಮ್ಯಾನ್‌’ ಇವು ಷಾ ನಿರ್ಮಾಣದಲ್ಲಿ ಮೂಡಿಬಂದ ಜನಪ್ರಿಯ ಚಿತ್ರಗಳು.ನಂತರ 1967ರಲ್ಲಿ ಟೆಲಿವಿಷನ್‌ ಬ್ರಾಡ್‌ಕಾಸ್ಟಿಂಗ್‌ ಲಿಮಿಟೆಡ್‌ ಮಾಧ್ಯಮ ಸಂಸ್ಥೆ ಸ್ಥಾಪಿಸಿ 30 ವರ್ಷಗಳ ಕಾಲ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ, 104ನೇ ವಯಸ್ಸಿನಲ್ಲಿ ನಿವೃತ್ತರಾದರು. ತಮ್ಮ ಬಹುಪಾಲು ಆದಾಯವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗಿಟ್ಟಿದ್ದರು. ನೊಬೆಲ್‌ ಪ್ರಶಸ್ತಿಯಷ್ಟೇ ಪ್ರಮುಖವಾದುದು ಎಂದು ಪರಿಗಣಿಸಲಾಗುವ ಷಾ ಪ್ರಶಸ್ತಿಯನ್ನು 2003ರಲ್ಲಿ ಆರಂಭಿಸಿದರು. ಅವರ ಸಮಾಜ ಸೇವೆಗಾಗಿ 1974ರಲ್ಲಿ ಎರಡನೇ ಕ್ವೀನ್‌ ಎಲಿಜಬೆತ್‌ ಅವರಿಂದ ಗೌರವಕ್ಕೂ ಪಾತ್ರರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry