ಶುಕ್ರವಾರ, ನವೆಂಬರ್ 22, 2019
27 °C

ಮಾಧ್ಯಮ ಪ್ರಚಾರಕ್ಕೆ ಸಮಯ ನಿಗದಿ

Published:
Updated:

ನವದೆಹಲಿ (ಪಿಟಿಐ):  ಕರ್ನಾಟಕದಲ್ಲಿ ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಸಂಬಂಧ ದೂರದರ್ಶನ ಮತ್ತು ಆಕಾಶವಾಣಿ ಪ್ರಚಾರಕಾರ್ಯಕ್ಕೆ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಮಂಗಳವಾರ ಸಮಯ ನಿಗದಿಪಡಿಸಿದೆ.ಪ್ರಸಾರ ಭಾರತಿ ಕಾರ್ಪೊರೇಷನ್ ಮೂಲಕ ವಿದ್ಯುನ್ಮಾನ ಮತ್ತು ರೇಡಿಯೊಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಸಲು ರಾಷ್ಟ್ರೀಯ  ಮತ್ತು ರಾಜ್ಯದ ಮಾನ್ಯತೆ ಪಡೆದ ಪಕ್ಷಗಳಿಗೆ ಮಾತ್ರ ಅವಧಿ ನೀಡಲು ಆಯೋಗ ನಿರ್ಧರಿಸಿದೆ.ರೇಡಿಯೊ ಹಾಗೂ ಟಿ.ವಿಗಳಲ್ಲಿ ಪ್ರಚಾರ ಕಾರ್ಯಕ್ಕಾಗಿ  ರಾಜ್ಯದ ರಾಜಕೀಯ ಪಕ್ಷಗಳಿಗೆ ಆಯೋಗ ನಿಗದಿಪಡಿಸಿರುವ ಸಮಯದ ಪ್ರಕಾರ, ಕಾಂಗ್ರೆಸ್ ಅತಿ ಹೆಚ್ಚು ಅಂದರೆ 166 ನಿಮಿಷ, ಆಡಳಿತ ಪಕ್ಷವಾದ ಬಿಜೆಪಿ 163 ಹಾಗೂ ಜೆಡಿಎಸ್ 111 ನಿಮಿಷ ಸಮಯ ಪಡೆದಿವೆ.ದೂರದರ್ಶನದ ಪ್ರಾದೇಶಿಕ ಕೇಂದ್ರದಲ್ಲಿ  ಯಾವುದೇ ಪಕ್ಷಗಳಿಗೂ ಒಂದು ಬಾರಿ 15 ನಿಮಿಷಕ್ಕಿಂತ ಹೆಚ್ಚಿನ ಸಮಯ ನೀಡುವಂತಿಲ್ಲ. ಈ ಸಂಬಂಧ ಪ್ರಸಾರ ಮತ್ತು ಸಮಯಕ್ಕೆ ಸಂಬಂಧಿಸಿದ ಪ್ರಾತ್ಯಕ್ಷಿಕೆಗಳನ್ನು ಪಕ್ಷಗಳಿಗೆ ನೀಡಲಾಗುವುದು ಎಂದಿರುವ ಆಯೋಗ,  ಕಳೆದ ಚುನಾವಣೆಯಲ್ಲಿ ಪಕ್ಷಗಳ ಸಾಧನೆಯ ಆಧಾರದ ಮೇಲೆ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗುವುದು ಎಂದು ಹೇಳಿದೆ. ರಾಜ್ಯದ ಜೆಡಿಎಸ್ ಪಕ್ಷ ಈ ಅವಕಾಶ ಪಡೆದ ಏಕಮಾತ್ರ ಪ್ರಾದೇಶಿಕ ಪಕ್ಷವಾಗಿದೆ.

ಪ್ರತಿಕ್ರಿಯಿಸಿ (+)