ಶನಿವಾರ, ಮೇ 15, 2021
22 °C

ಮಾಧ್ಯಮ ಫೆಲೋಷಿಪ್‌ಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಕ್ಕಳ ಹಕ್ಕುಗಳ ಬಗೆಗೆ ಆಸಕ್ತಿ ಇರುವ ಮತ್ತು ಆ ಕುರಿತು ಲೇಖನಗಳನ್ನು ಬರೆಯುತ್ತಿರುವ, ಬರೆಯಲಿರುವ ವರದಿಗಾರರಿಗೆ `ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ~ವು ಮಾಧ್ಯಮ ಫೆಲೋಷಿಪ್ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.`ಯುನಿಸೆಫ್-ಕೆಸಿಆರ್‌ಒ ಮಕ್ಕಳ ಹಕ್ಕುಗಳಿಗಾಗಿ ಮಾಧ್ಯಮ ಫೆಲೋಷಿಪ್~ ಎಂಬ ಶೀರ್ಷಿಕೆಯಡಿ ನಿಗಾಕೇಂದ್ರವು ಈ ಫೆಲೋಷಿಪ್ ನೀಡಲಿದೆ (ಮಕ್ಕಳ ಆರೋಗ್ಯ ಮತ್ತು ಉಳಿವು, ಮಕ್ಕಳ ರಕ್ಷಣೆ, ಮಕ್ಕಳ ಶಿಕ್ಷಣ, ಅಭಿವೃದ್ಧಿ ಮತ್ತು ಭಾಗವಹಿಸುವಿಕೆ).ಮಕ್ಕಳು ಹಕ್ಕುಗಳನ್ನು ಕುರಿತಾದ ನಿರ್ದಿಷ್ಟ ಸಂಖ್ಯೆಯ ಲೇಖನಗಳನ್ನು ನಿರ್ದಿಷ್ಟ ಸಮಯದಲ್ಲಿ ಬರೆಯುವ ಬದ್ಧತೆಯ ಖಾತ್ರಿಯೊಂದಿಗೆ ಆಯ್ದ ವರದಿಗಾರರಿಗೆ ಈ ಫೆಲೋಷಿಪ್ ದೊರೆಯಲಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ವರದಿಗಾರರು ಮತ್ತು ಹವ್ಯಾಸಿ ಲೇಖಕರೂ ಅರ್ಜಿ ಸಲ್ಲಿಸಬಹುದು. ಈ ಫೆಲೋಷಿಪ್‌ಗೆ ಆಯ್ಕೆಯಾದ ವರದಿಗಾರರಿಗೆ 20 ಸಾವಿರ ರೂಪಾಯಿಗಳನ್ನು ಮುಂದಿನ ಸಂಶೋಧನೆಗೆ ಮತ್ತು ಅಧ್ಯಯನಗಳಿಗೆ ಬಳಸಲು ನೀಡಲಾಗುತ್ತದೆ.ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ: ಚೈಲ್ಡ್ ರೈಟ್ಸ್ ಟ್ರಸ್ಟ್, ನಂ. 4606, ಹೈ ಪಾಯಿಂಟ್ 4, ಅರಮನೆ ರಸ್ತೆ, ಬೆಂಗಳೂರು-01 ಅಥವಾ ಇ ಮೇಲ್-   kcronodalcrt@gmail.com ಸಂಪರ್ಕಿಸಬೇಕು. ದೂರವಾಣಿ ಸಂಖ್ಯೆ- 4113 8285. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.25.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.