ಮಾಧ್ಯಮ ಸಂವಾದದಲ್ಲಿ ಏರ್ ಮಾರ್ಷಲ್ ನೀರಜ್ ಕುರ್ಕೆಜ ಹೇಳಿಕೆ

7

ಮಾಧ್ಯಮ ಸಂವಾದದಲ್ಲಿ ಏರ್ ಮಾರ್ಷಲ್ ನೀರಜ್ ಕುರ್ಕೆಜ ಹೇಳಿಕೆ

Published:
Updated:

ಬೆಂಗಳೂರು: `ಚೀನಾದ ಮೇಲೆ ಯುದ್ಧ ಮಾಡಬೇಕಾದ ಸಂದರ್ಭ ಸೃಷ್ಟಿಯಾದರೆ ಅದನ್ನು ಎದುರಿಸಲು ವಾಯುಪಡೆ ಸನ್ನದ್ಧವಾಗಿದೆ~ ಎಂದು ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ನೀರಜ್ ಕುರ್ಕೆಜ ಹೇಳಿದರು.

ನಗರದಲ್ಲಿರುವ ಭಾರತೀಯ ವಾಯುಪಡೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.ಭಾರತ- ಚೀನಾ ನಡುವೆ ಯುದ್ಧ ನಡೆಯುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ವರದಿಯಲ್ಲಿ ಹುರುಳಿಲ್ಲ. ಕೆಲವು ದುಷ್ಟ ಶಕ್ತಿಗಳು ಇಂತಹ ಸುದ್ದಿಯನ್ನು ಸೃಷ್ಟಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿವೆ. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು.ಭಾರತ ನೆರೆ ರಾಷ್ಟ್ರಗಳ ಜತೆ ಸ್ನೇಹ ಬಯಸುವ ರಾಷ್ಟ್ರವಾಗಿದೆ. ಯುದ್ಧದ ಮೂಲಕ ವಿಸ್ತಾರವನ್ನು ಹೆಚ್ಚಿಸಿಕೊಳ್ಳುವ ಯಾವುದೇ ಉದ್ದೇಶ ಭಾರತಕ್ಕಿಲ್ಲ. ಆದರೆ ಯುದ್ಧದ ಸಂದರ್ಭ ಬಂದರೆ ಭಾರತೀಯ ವಾಯು ಪಡೆ ಸನ್ನದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಬೆಂಗಳೂರಿನ ವಾಯುಪಡೆ ತರಬೇತಿ ಕೇಂದ್ರದಲ್ಲಿ ಎಲ್ಲ ಬಗೆಯ ತರಬೇತಿ ನೀಡಲಾಗುತ್ತಿದೆ. ಅತ್ಯಾ ಧುನಿಕ ಮತ್ತು ಉನ್ನತ ತಂತ್ರಜ್ಞಾನವನ್ನು ಬಳಸಿ ಕೊಂಡು ವಾಯುಪಡೆಯನ್ನು ಬಲವರ್ಧನೆಗೊ ಳಿಸಲಾಗುತ್ತಿದೆ. ಇತಿಮಿತಿಯ ಒಳಗೆ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry