ಮಾಧ್ಯಮ ಸಮಿತಿ ಪುನರ್‌ರಚನೆ:ಕೆಪಿಸಿಸಿಗೆ 18 ವಕ್ತಾರರು

7

ಮಾಧ್ಯಮ ಸಮಿತಿ ಪುನರ್‌ರಚನೆ:ಕೆಪಿಸಿಸಿಗೆ 18 ವಕ್ತಾರರು

Published:
Updated:

ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗವನ್ನು ಪುನರ್‌ರಚನೆ ಮಾಡಿದ್ದು, 18 ವಕ್ತಾರರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆದೇಶ ಹೊರಡಿಸಿದ್ದಾರೆ.ಶ್ರೀಕಂಠಮೂರ್ತಿ ಅವರನ್ನು ವಿಭಾಗದ ಸಂಚಾಲಕರನ್ನಾಗಿ ಮತ್ತು ಡಾ.ಆನಂದಕುಮಾರ್ ಅವರನ್ನು ಸಹ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.

ನಜೀರ್ ಅಹಮದ್, ಕೆ.ದಿವಾಕರ್, ಡಾ.ರಾಜೀವ್ ಗೌಡ, ಪ್ರಕಾಶ್ ಕೆ.ರಾಥೋಡ್, ಪ್ರೊ.ಕೆ.ಇ.ರಾಧಾಕೃಷ್ಣ, ಡಾ.ಲೋಹಿತ್ ಡಿ.ನಾಯ್ಕರ್ ಮತ್ತು ನಿವೇದಿತ ಆಳ್ವ ಅವರನ್ನು ಪಕ್ಷಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಇಂಗ್ಲಿಷ್ ಭಾಷೆಯಲ್ಲಿ ಮಾಧ್ಯಮಗಳ ಜೊತೆ ವ್ಯವಹರಿಸಲು ನೇಮಿಸಲಾಗಿದೆ.ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ರಾಣಿ ಸತೀಶ್, ಡಿ.ಆರ್.ಪಾಟೀಲ್, ಮಹಿಮಾ ಪಟೇಲ್, ಬಿ.ಎ.ಹಸನಬ್ಬ, ನಂಜಯ್ಯನಮಠ, ಮೋಹನ್ ಕೊಂಡಜ್ಜಿ, ಪಿ.ಆರ್.ರಮೇಶ್, ಜಿ.ಸಿ.ಚಂದ್ರಶೇಖರ್, ಸಿ.ಆರ್. ನಾರಾಯಣಪ್ಪ ಮತ್ತು ಸಿ.ಎಂ.ಧನಂಜಯ ಅವರನ್ನು ಕನ್ನಡ ಭಾಷೆಯಲ್ಲಿ ಮಾಧ್ಯಮಗಳೊಂದಿಗೆ ವ್ಯವಹರಿಸಲು ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry