ಶನಿವಾರ, ನವೆಂಬರ್ 23, 2019
17 °C

ಮಾನನಷ್ಟ ಮೊಕದ್ದಮೆ: ಜಯಾ ಸಮರ್ಥನೆ

Published:
Updated:

ಚೆನ್ನೈ (ಪಿಟಿಐ): ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ವಿರೋಧ ಪಕ್ಷಗಳ ಮುಖಂಡರ ವಿರುದ್ಧ ಸರ್ಕಾರ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗಳನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ.ವಿಧಾನಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಡಿಎಂಡಿಕೆ ಶಾಸಕ ಎಸ್. ರಾಮಚಂದ್ರನ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಜಯಲಲಿತಾ, `ಸಾರ್ವಜನಿಕ ಜೀವನದಲ್ಲಿ, ಅದರಲ್ಲೂ ರಾಜಕೀಯದಲ್ಲಿರುವವರು ತಮ್ಮ ಮಾತುಗಳನ್ನು ತೂಗಿ ಆಡಬೇಕು. ಇಲ್ಲದಿದ್ದರೆ ಇಂತಹ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ' ಎಂದರು.

ಪ್ರತಿಕ್ರಿಯಿಸಿ (+)