ಮಾನವನ ದುರಾಸೆಯಿಂದ ಪರಿಸರ ನಾಶ

ಬುಧವಾರ, ಜೂಲೈ 24, 2019
24 °C

ಮಾನವನ ದುರಾಸೆಯಿಂದ ಪರಿಸರ ನಾಶ

Published:
Updated:

ಬೆಳಗಾವಿ: ನವನ ಅಜಾಗರೂಕತೆ ಹಾಗೂ ದುರಾಸೆಯಿಂದಾಗಿಯೇ ಇಂದು ಪರಿಸರ ವಿನಾಶದ ಅಂಚಿಗೆ ತಲುಪುತ್ತಿದೆ” ಎಂದು ಬಳ್ಳಾರಿ ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೊ. ಜಿ.ಕೆ. ಖಡಬಡಿ ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯಿತಿ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹಾಗೂ ಡಾ. ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ವಿಶ್ವ ಪರಿಸರ ದಿನಾಚರಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕೆ.ಎಸ್.ಆರ್. ಶಿಕ್ಷಣ ಮಹಾವಿದ್ಯಾಲಯದ ವ್ಯವಸ್ಥಾಪಕ ಕೆ.ಬಿ. ಕುರಿತ, “ಶುದ್ಧ ಪರಿಸರ ಮಾನವನ ನಿಜವಾದ ಸಂಪನ್ಮೂಲ ಎನ್ನುವುದನ್ನು ಅರಿಯದೇ ಮಾನವ ತನ್ನ ವಿಲಾಸಿ ಜೀವನಕ್ಕಾಗಿ ಅರಣ್ಯ ನಾಶ ಮಾಡುತ್ತಾ ಪರಿಸರ ಮಾಲಿನ್ಯ ಮಾಡುತ್ತಿದ್ದಾನೆ” ಎಂದು ವಿಷಾದಿಸಿದರು.ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕ.ರಾ.ವಿ.ಪ. ಕಾರ್ಯಕಾರಿ ಮಂಡಳಿ ಸದಸ್ಯ ಸಂಜಯ ನಾಗಲೋಟಿಮಠ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕ ಸಿ.ಜಿ. ಹಿರೇಮಠ, ಪ್ರಾಚಾರ್ಯ ಡಾ. ಎ.ಎಲ್. ಪಾಟೀಲ, ವಿ.ಎಸ್. ಗನವಾರಿ, ಎಸ್.ಕೆ. ತಳವಾರ, ಪರಿಸರವಾದಿ ಅಮೃತ ಚರಂತಿಮಠ ಉಪಸ್ಥಿತರಿದ್ದರು.ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ಯರಜೆರ್ವಿಮಠ ವಂದಿಸಿದರು.ಸ್ಪರ್ಧೆಯಲ್ಲಿ ಬಹುಮಾನ ವಿಜೇತರು

ವಿಶ್ವ ಪರಿಸರ ದಿನ ಅಂಗವಾಗಿ ಡಾ. ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರವು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರು ಈ ಕೆಳಗಿನಂತಿದ್ದಾರೆ.ಚಿತ್ರಕಲೆ ಸ್ಪರ್ಧೆ: ಕಿರಿಯ ಪ್ರಾಥಮಿಕ ವಿಭಾಗ: ಸಂಕೇತ ಶಾನಭಾಗ (ಎನ್.ಎಸ್.ಪೈ ಪ್ರಾಥಮಿಕ ಶಾಲೆ)-1, ರಾಜೇಂದ್ರ ಕಣಬರಗಿ(ಎನ್.ಎಸ್.ಪೈ ಪ್ರಾಥಮಿಕ ಶಾಲೆ)-2, ಆಯೇಷಾ ಮಿರಜನ್ನವರ (ಲಿಟಲ್ ಸ್ಕಾಲರ್ಸ್‌ ಅಕಾಡೆಮಿ ಶಾಲೆ)-3.

ಹಿರಿಯ ಪ್ರಾಥಮಿಕ ವಿಭಾಗ: ರೋಹಿನ್ ಎಸ್. ಲೆಂಗಡೆ (ಸೇಂಟ್ ಪಾಲ್ಸ್ ಸ್ಕೂಲ್)-1, ಮಣಿಶಂಕರ ಲ. ಗುಬ್ಯಾಗೋಳ (ಶ್ರೀಮತಿ ಜಿ.ಜಿ .ಯೆಳ್ಳೂರ ಪ್ರಾಥಮಿಕ ಶಾಲೆ)-2, ಸೌರಭ ಶಿ. ಪಾಟೀಲ(ಶ್ರೀಮತಿ ಜಿ.ಜಿ .ಯೆಳ್ಳೂರ ಪ್ರಾಥಮಿಕ ಶಾಲೆ)-3.ಪ್ರೌಢಶಾಲೆ ವಿಭಾಗ: ಪ್ರೀಯಾಂಕ ಪಾಟೀಲ (ಎಂ.ವಿ.ಎಚ್. ಆಂಗ್ಲಮಾಧ್ಯಮ ಪ್ರೌಢಶಾಲೆ)-1, ಪೂಜಾ ದೇಸೂರಕರ್ (ಜಿ.ಜಿ. ಚಿಟ್ನೀಸ್ ಆಂಗ್ಲಮಾಧ್ಯಮ ಪ್ರೌಢಶಾಲೆ)-2, ಋಷಿಕಾ ಲೆಂಗಡೆ(ಜಿ.ಜಿ. ಚಿಟ್ನೀಸ್ ಆಂಗ್ಲಮಾಧ್ಯಮ ಪ್ರೌಢಶಾಲೆ)-3.ಬೀಜಗಳ ಸಂಗ್ರಹಣೆ- ಜೋಡಣೆ ಸ್ಪಧೆ: ಪ್ರಾಥಮಿಕ ವಿಭಾಗ: ಆಯೇಷಾ ಮಿರಜನ್ನವರ(ಲಿಟಲ್ ಸ್ಕಾಲರ್ಸ್‌ ಅಕಾಡೆಮಿ ಶಾಲೆ)-1, ತಾನಿಷ್ಕ ರಾಮಗೋಳ (ಲವ್‌ಡೇಲ್ ಸೆಂಟ್ರಲ್ ಸ್ಕೂಲ್)-2, ಪ್ರಶಾಂತ ಕಾಂಬಳೆ(ಬಿ.ಎಸ್. ಹಂಚಿನಾಳ ಕನ್ನಡ ಪ್ರಾಥಮಿಕ ಶಾಲೆ)-3. ಪ್ರೌಢಶಾಲೆ ವಿಭಾಗ: ಸೌಮ್ಯ  ಶಿಂಗೆಣ್ಣವರ (ಸ್ವಾಧ್ಯಾಯ ವಿದ್ಯಾಮಂದಿರ ಪ್ರೌಢಶಾಲೆ)-1, ನೇತ್ರಾ. ಪಾಟೀಲ(ಸ್ವಾಧ್ಯಾಯ ವಿದ್ಯಾಮಂದಿರ ಪ್ರೌಢಶಾಲೆ)-2.ಔಷಧಿ ಸಸ್ಯ ಗುರುತಿಸುವ ಸ್ಪರ್ಧೆ: ಸ್ವಾತಿ ಭಜಂತ್ರಿ(ಸ್ವಾಧ್ಯಾಯ ವಿದ್ಯಾಮಂದಿರ ಪ್ರೌಢಶಾಲೆ)-1, ವಿಷ್ಣು ದೇಶಪಾಂಡೆ (ಸ್ವಾಧ್ಯಾಯ ವಿದ್ಯಾಮಂದಿರ ಪ್ರೌಢಶಾಲೆ)-2.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry