ಮಂಗಳವಾರ, ನವೆಂಬರ್ 12, 2019
20 °C

ಮಾನವನ ಶಾಂತಿಗೆ ಯೋಗ ಬಹುಮುಖ್ಯ

Published:
Updated:

ಚಿತ್ರದುರ್ಗ: ಯೋಗದಿಂದ ಮಾತ್ರ ಮಾನವನಿಗೆ ಜೀವನದಲ್ಲಿ ಶಾಂತಿ ಹಾಗೂ ಸಮಾಧಾನ ದೊರೆಯಲು ಸಾಧ್ಯ ಎಂದು ರಾಜಶೇಖರ್ ಚಳಗೇರಿ ಹೇಳಿದರು.ತಾಲ್ಲೂಕಿನ ಲಕ್ಷ್ಮಿಸಾಗರದಲ್ಲಿ ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಹಾಗೂ ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಕಾಲೇಜಿನ 2012-13ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1ಮತ್ತು 2ರ ವಿಶೇಷ ವಾರ್ಷಿಕ ಶಿಬಿರದಲ್ಲಿ ಅವರು ಮಾತನಾಡಿದರು.ಗ್ರಾ.ಪಂ. ಉಪಾಧ್ಯಕ್ಷೆ ಶಂಕರಮ್ಮ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಹೇಶ್ವರಯ್ಯ, ತಿಪ್ಪೇಸ್ವಾಮಿ, ಚಿಕ್ಕಣ್ಣ, ವಕೀಲ ಬಾಬು, ಲಿಂಗರಾಜ್, ರವಿಕುಮಾರ್, ನಾಗರಾಜ್, ಅಶೋಕ್, ಪ್ರೊ.ತಾರೇಶ್, ಪ್ರೊ.ಎಸ್.ಎಂ. ಗುರುಮೂರ್ತಿ, ಪ್ರೊ.ವಿ.ವಿ. ಮೂಲಿಮನಿ, ಪ್ರೊ.ಜಿ.ಪಿ. ನಾಗರಾಜ್, ಪ್ರೊ.ಜಿ.ಎಸ್. ಚಂದ್ರಪ್ಪ, ಪ್ರೊ.ಸಿದ್ದಪ್ಪ ಹಾಜರಿದ್ದರು. ಪ್ರೊ.ಜಯಣ್ಣ ಪ್ರಾರ್ಥಿಸಿದರು. ಪ್ರೊ.ಪರಶುರಾಮ್ ಖಟಾವ್‌ಕಾರ್  ನಿರೂಪಿಸಿದರು.ಬೇಸಗೆ ಶಿಬಿರ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏ. 5ರಿಂದ ಮೇ 5ರವರೆಗೆ ಒಂದು ತಿಂಗಳ ಕಾಲ 8ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಫುಟ್‌ಬಾಲ್ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.ಬೃಂದಾವನ ಯುವಕ ಸಂಘ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿದ್ದು, ಪ್ರತಿನಿತ್ಯ ಬೆಳಿಗ್ಗೆ 6.30ರಿಂದ 8.30ರವರೆಗೆ ಹಾಗೂ ಸಂಜೆ 4.30ರಿಂದ 6.30ರವರೆಗೆ ಶಿಬಿರ ನಡೆಯಲಿದೆ.ಬೆಂಗಳೂರಿನ ಫುಬ್ಬಾಲ್ ಕ್ರೀಡಾಪಟು ದಾದಾಪೀರ್ ಶಿಬಿರದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ದೂರವಾಣಿ: 39097ಗೆ ಸಂಪರ್ಕಿಸಬಹುದುಎಂದು ಬೃಂದಾವನ ಯುವಕ ಸಂಘದ ಕಾರ್ಯದರ್ಶಿ ಕೆ. ಷಪೀ ಉರ್ ರೆಹಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮನವಿ

ಜಿ.ಪಂ. ಮುಂದಿನ ಅಧ್ಯಕ್ಷರಾಗಿ ಹೊಳಲ್ಕೆರೆ ತಾಲ್ಲೂಕಿನ ಎಚ್.ಡಿ. ಪುರ ಕ್ಷೇತ್ರದ ಜಿ.ಪಂ. ಸದಸ್ಯೆ ಯಾದವ ಸಮುದಾಯದ ಇಂದಿರಾ ಕಿರಣ್ ಅವರನ್ನು ಆಯ್ಕೆ ಮಾಡಿ ಹಿಂದುಳಿದ ವರ್ಗಕ್ಕೆ ಅಧಿಕಾರ ದೊರಕಿಸಿಕೊಡಬೇಕು ಎಂದು ಮಾಜಿ ಶಾಸಕ ಎಚ್. ಆಂಜನೇಯ ವರಿಷ್ಠರಿಗೆ ಕೋರಿದ್ದಾರೆ.ಹಳೇಯ ಒಡಂಬಡಿಕೆಯಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಬಸವರಾಜ್ ಅವರು ತಮ್ಮ ಸ್ಥಾನಕ್ಕೆ ಏ. 2ರಂದು ರಾಜೀನಾಮೆ ಸಲ್ಲಿಸಿದ್ದಾರೆ.  ಈ ಮೂಲಕ ಯಾದವ ಸಮುದಾಯದ ಸದಸ್ಯರೊಬ್ಬರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹುದ್ದೆ ಅಲಂಕರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕಳೆದ 6 ತಿಂಗಳ ಹಿಂದೆ ಗೀತಾ ಬಸವರಾಜ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ವೇಳೆ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಹಳೇಯ ಮಾತುಕತೆ ಪ್ರಕಾರ ಗೀತಾ ಬಸವರಾಜ್ ಅವರು ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯ್ತಿ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)