ಮಾನವಹಕ್ಕು: ಜಿಲ್ಲೆಯಲ್ಲಿ 1352 ದೂರು

7

ಮಾನವಹಕ್ಕು: ಜಿಲ್ಲೆಯಲ್ಲಿ 1352 ದೂರು

Published:
Updated:

ಕುಣಿಗಲ್: ಸರ್ಕಾರಿ ಸವಲತ್ತು ಎಲ್ಲ ರಿಗೂ ದೊರಕಲು ಅಧಿಕಾರಿಗಳು ಶ್ರಮಿಸ ಬೇಕೆಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ಡಾ.ಎಸ್.ಆರ್.ನಾಯಕ್ ತಿಳಿಸಿದರು.ಕಂದಾಯ ಭವನದಲ್ಲಿ ಗುರುವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಾನವ ಹಕ್ಕುಗಳ ಸಂರಕ್ಷಣೆಗೆ ಎಲ್ಲರೂ ಪ್ರಯತ್ನಿಸಬೇಕಾದ ಅನಿವಾರ್ಯತೆ ಸೃಷ್ಟಿ ಯಾಗಿದೆ ಎಂದರು.ರಾಜ್ಯದಲ್ಲಿ 2011ನೇ ಸಾಲಿನವರೆಗೆ 31,139 ಪ್ರಕರಣಗಳು ದಾಖಲಾಗಿದ್ದು, 5,903 ಪ್ರಕರಣಗಳನ್ನು ಮಾಧ್ಯಮದ ವರದಿ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ದಾಖಲಿಸಲಾಗಿದೆ. 20,153 ಪ್ರಕರಣಗಳನ್ನು ಇತ್ಯರ್ಥ ಗೊಳಿಸಲಾಗಿದೆ. ತುಮಕೂರು ಜಿಲ್ಲೆ ಯಲ್ಲಿ 1,352 ಪ್ರಕರಣ ದಾಖಲಾ ಗಿದ್ದು, 848 ಪ್ರಕರಣ ಇತ್ಯರ್ಥ ಗೊಳಿಸಲಾಗಿದೆ ಎಂದರು.ಸಭೆಗೆ ತಡವಾಗಿ ಬಂದ ಪುರಸಭೆ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ಸಭೆಗೆ ಗೈರುಹಾಜರಾದ ಅಧಿಕಾರಿಗಳ ಪಟ್ಟಿ ಪಡೆದು ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು ಎಂದರು.ಸ್ಮಶಾನ ಜಾಗ ಒತ್ತುವರಿ ಮಾಡಿ ಕೊಂಡಿರುವವರಿಗೆ ಪುರಸಭೆ ವತಿಯಿಂದ ಖಾತೆ ಮಾಡಿಕೊಟ್ಟಿರುವ ಬಗ್ಗೆ, 1991ರಲ್ಲಿ ಮಲ್ಲಾಘಟ್ಟದಲ್ಲಿ ಆಶ್ರಯ ನಿವೇಶನಗಳ ಹಂಚಿಕೆ ಮಾಡಿದ್ದು, ಇದುವರೆಗೂ ಫಲಾನುಭವಿಗಳಿಗೆ ಹಸ್ತಾ ಂತರ ಮಾಡದಿರುವ ಬಗ್ಗೆ, ಮಾದಪ್ಪನ ಹಳ್ಳಿ ಬಗರ್‌ಹುಕುಂ ಸಾಗುವಳಿದಾರರಿಗೆ ಹಂಚಿಕೆಯಾಗಿದ್ದ ಜಮೀನನ್ನು ಅಕ್ರಮ ವಾಗಿ ಖಾತೆ ಮಾಡಿ ಮಾರಾಟ ಮಾಡಿ ರುವ ಬಗ್ಗೆ, ಸಂತೆ ಮೈದಾನದ ಅವ್ಯವಸ್ಥೆ ಬಗ್ಗೆ  ಹಾಗೂ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ದೂರು ನೀಡಿದರು.ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪುಟ್ಟಶಾಮಯ್ಯ, ಲೊಕೋಪಯೋಗಿ ಸಹಾಯಕ ಎಂಜಿನಿ ಯರ್ ಸುರೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಯಪ್ರಕಾಶ್, ಸಿಡಿಪಿಒ ಚೇತನ್‌ಕುಮಾರ್ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry